ಕಲ್ಪ ಮೀಡಿಯಾ ಹೌಸ್ | ಸೊರಬ |
ಯಾವುದೇ ಕೆಲಸ ಮಾಡಿದರೂ ಅದು ಗೌರವಯುತವಾದ್ದೆ ಆಗಿರುತ್ತದೆ. ಸ್ವೀಕರಿಸುವ, ಸಲ್ಲಿಸುವ ಸೇವೆಯಲ್ಲಿ ಶ್ರದ್ಧೆ, ಸಹನೆ ಇದ್ದಲ್ಲಿ ಎಲ್ಲೂ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಅಂಗನವಾಡಿ ನಿವೃತ್ತ ಶಿಕ್ಷಕಿ ಶಕುಂತಲಾ ಅಭಿಪ್ರಾಯ ಪಟ್ಟರು.
ತಾಲ್ಲೂಕು ಯಲಸಿ ಗ್ರಾಮದಲ್ಲಿ ಪಟ್ಟಣದ ಸ್ನೇಹ ಸುರಭಿ ಮಹಿಳಾ ಸಂಘ ವಿಶ್ವ ಮಹಿಳಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸನ್ಮಾನಿತರಾದ ಜಯಮ್ಮ ಸಿಸ್ಟರ್ ಮಾತನಾಡಿ, ಪ್ರಾಕೃತಿಕ ವೈಪರೀತ್ಯ, ಆಹಾರ, ವಿಹಾರದ ಬದಲಾವಣೆಯಿಂದಾಗಿ ಮಹಿಳೆಯರ ಪಿರಿಯಡ್ಸ್ ಮೇಲೂ ಪರಿಣಾಮ ಬೀರಿದೆ. ಹಾಗಾಗಿ, ಇಂತಹ ಅಸಮತೋಲನ ಸಂದರ್ಭದಲ್ಲಿ ಮಹಿಳೆಯರು ಹೆಚ್ಚು ಕಾಳಜಿ ವಹಿಸಿ ತಮ್ಮ ಆರೋಗ್ಯದ ಮೇಲೆ ಗಮನಹರಿಸಬೇಕು ಎಂದರು.
Also read: ಮೋದಿ ಹೇಳಿದ ಕಾಂಗ್ರೆಸ್ ಅಜೆಂಡಾ ಯಾವುದು? ಏನದು ಪ್ರಧಾನಿ ಉಲ್ಲೇಖಿಸಿದ ದೆಹಲಿ ಕಲೆಕ್ಟರ್?
ಮುಖ್ಯ ಅತಿಥಿ ಶಿಕ್ಷಕಿ ಸಾವಿತ್ರಮ್ಮ ಶ್ರೀಪಾದ್ ಮಾತನಾಡಿ, ಮಹಿಳೆಯರು ತಾವು ತೊಡಗಿಸಿಕೊಂಡ ಯಾವುದೇ ಸೇವೆಯಲ್ಲಿಯೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅವರ ಸೇವೆಗೆ ಪುರುಷರು ಸಹಾ ಬೆನ್ನೆಲುಬಾಗಿ ನಿಲ್ಲಬೇಕು. ಆಗ ಅವರ ಸೇವೆಗೆ, ಕಾರ್ಯತತ್ಪರತೆಗೆ ದೇಶದ ಒಳಿತಿಗೆ ಸಹಕರಿಸಿದಂತಾಗುತ್ತದೆ ಎಂದರು.
ಸಂಘದ ಗೌರವಾಧ್ಯಕ್ಷೆ ರೇಣುಕಮ್ಮಗೌಳಿ ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷೆ ಸರಸ್ವತಿ ನಾವುಡಾ ಅಧ್ಯಕ್ಷತೆ ವಹಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅಲ್ಲಿನ ಸಂಸ್ಕೃತಿ, ಸಾಮಾಜಿಕ ಕಾಳಜಿಯ ಅರಿವಿನ ಜ್ಣಾನ ಪಡೆಯಲು ಅವಕಾಶವಿದೆ. ಇಂದಿಗೂ ಹಳ್ಳಿಗಳಲ್ಲಿ ಸಹಕಾರ ಮನೋಭಾವ ಗಾಢವಾಗಿ ಉಳಿದುಕೊಂಡಿದ್ದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.
ಪಾರಂಪರಿಕ ಹಸೆ ಕಲೆ ಕಲಾವಿದೆ ಸಾವಿತ್ರಮ್ಮ ಒಕ್ಕಲಕೊಪ್ಪ, ಕೃಷಿ ಸಾಧಕಿ ಸವಿತಾ ಪರುಶುರಾಮ ಒಡೇರ್, ಸಾಮಾಜಿಕ ಸೇವಾ ನಿರತರಾದ ಆರತಿ ಮಹೇಶ್, ವಸುಧಾ ಸತೀಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಾಯಕಿ ಲಕ್ಷ್ಮೀಮರುಳೀಧರ್, ಸಾವಿತ್ರಮ್ಮ ಗುತ್ತಿ ನಾಗರಾಜ್, ಶಿಶು ಸಾಹಿತಿ ಶ್ರೀಮತಿ, ನಾಗರಾಜ ಗುತ್ತಿ, ಕೃಷಿಕ ವಿ.ಕೆ. ಪರಶುರಾಮ್, ಮಹಿಳಾ ಸಂಘದ ಪದಾಧಿಕಾರಿ ಸದಸ್ಯರು, ಗ್ರಾಮದ ಮಹಿಳೆಯರು ಮೊದಲಾದವರು ಇದ್ದರು.
ರಾಜೇಶ್ವರಿ ಪ್ರಾರ್ಥಿಸಿದರು, ಶ್ರೀಮತಿ ಸ್ವಾಗತಿಸಿದರು. ರೂಪ ಮಧುಕೇಶ್ವರ ನಿರೂಪಿಸಿದರು. ಮಮತಾ ನಾಡಿಗ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















