ಕಲ್ಪ ಮೀಡಿಯಾ ಹೌಸ್ | ಸೊರಬ |
ಹಣದಾಸೆಗಾಗಿ ಹೆಣ್ಣು ಹೊನ್ನು ಮಣ್ಣು ಮೂರನ್ನು ಮಾರಿಕೊಳ್ಳುವ ವಿಕೃತ ಜನರ ನಡುವೆ ಬದುಕಿಗೆ ಅವಶ್ಯ ಬೇಕಾದ ನದಿ ಕೆರೆ ಹಳ್ಳಕೊಳ್ಳಗಳ ಮೂಲಕ್ಕೂ ಧಕ್ಕೆ ತರುವ ಕಿರಾತಕರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.
ಸೊರಬ ಹೊಸಪೇಟೆ ಬಡಾವಣೆಯ ಸ.ನಂ. 172ರ ಕಪ್ಪೆ ಕೆರೆ ಹಿಂದೆಯೆ ಇಟ್ಟಿಗೆ ತಯಾರಿಗಾಗಿ ಮಣ್ಣು ಅಗೆದು ನೀರು ಸಂಗ್ರಹಣ ಸಾಮರ್ಥ್ಯ ಕುಗ್ಗಿತ್ತು. ಕೆರೆಯ ಬಗೆದು ಎಲ್ಲಿ ಬೇಕೆಂದರಲ್ಲಿ ಗುಂಡಿ ತೋಡಿ ನೀರಿಂಗದಂತೆ ಹಾಗೂ ಕೆರೆಯನ್ನು ಒತ್ತುವರಿ ಮಾಡಿದ್ದ ಬೆನ್ನಲ್ಲೆ ಲೇಔಟ್’ನವರಿಗೆ ಯಥೇಚ್ಛವಾಗಿ ಮಣ್ಣು ತೆಗೆದು ಕೆರೆ ನಾಶಪಡಿಸುವ ಕಾರ್ಯ ನಡೆಯುತ್ತಿದೆ.
ಬಹಳಷ್ಟು ಕೊಳವೆ ಬಾವಿಗಳು ನಿಷ್ಕ್ರಿಯ ಗೊಳ್ಳುತ್ತಿವೆ ಕೊಳವೆಬಾವಿಗಳು ತೆರದ ಬಾವಿಗಳಾಗಲಿ ಕೆರೆ ಹಳ್ಳ ತೊರೆಗಳೆ ಮೂಲ ಇವುಗಳಿಗೆ ಅರಣ್ಯವೇ ಮೂಲ ಮೂಲವನ್ನೇ ಹಾಳುಮಾಡುತ್ತಿರುವ ಕೃತ್ಯ ತ್ತೀರಾ ಆತಂಕಕಾರಿ ಸಂಗತಿಯಾಗಿದೆ.
-ಚಿದಾನಂದ ಗೌಡ , ಸಾರ್ವಜನಿಕರ ಹಿತರಕ್ಷಣಾ ಸಮಿತಿ

ಒಂದೆಡೆ ಅವೈಜ್ಞಾನಿಕ ಹೂಳು ತೆಗೆಯುವುದರಿಂದ ಕೆರೆ ಹಾಳು ಸಾಲದೆಂಬಂತೆ ವ್ಯಾಪಾರಕ್ಕಾಗಿ ಕೆರೆ ಮಣ್ಣು ಸಾಗಾಣಿಕೆ ಇನ್ನೂ ಮುಂದುವರೆದು ಟನ್ ಗಟ್ಟಲೆ ಪ್ಲಾಸ್ಟಿಕ್ ಸೇರಿದಂತೆ ಪರಿಸರ ಮಾರಕ ತ್ಯಾಜ್ಯವನ್ನು ತ್ಯಾಜ್ಯ ವಿಲೇವಾರಿ ಘಟಕ ಇದ್ದು ಕೆರೆಗೆ ಚಲ್ಲಲಾತ್ತಿದೆ.
ಸದುದ್ದೇಶದಿಂದ ಪೂರ್ವಿಜರ ಜನತೆಗಾಗಿ ನೀರಿನ ಮೂಲಗಳನ್ನು ಕಟ್ಟಿಕೊಟ್ಟರು. ಇಂದು ನಾವು ದುರಾಸೆಗೆ ಅಂತಹ ಮೂಲಗಳನ್ನು ನಾಶಪಡಿಸುತ್ತಿರುವುದು ಹೇಯಕರ ಸಂಗತಿ. ಕಾನೂನು ಬಲವಿಲ್ಲದಿದ್ದರೆ ಈ ಭೂಮಿಯನ್ನು ಉಳಿಸಿಕೊಳ್ಳುವುದು ಅಸಾಧ್ಯ.
-ಶ್ರೀ ಪಾದ ಬಿಚ್ಚುಗತ್ತಿ, ಪರ್ಯಾವರಣ ಕಾರ್ಯಕರ್ತ
Also read: ಲೈಂಗಿಕ ದೌರ್ಜನ್ಯ ಕೇಸ್ | ಶಾಸಕ ಎಚ್.ಡಿ. ರೇವಣ್ಣಗೆ ಜಾಮೀನು ಮಂಜೂರು
ಈಚೆಗಷ್ಟೆ ಜಿಲ್ಲಾಧಿಕಾರಿಗಳು ಕೆರೆ ಹೂಳು, ಮಣ್ಣು ತೆಗೆಯುವ ವಿಚಾರದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾಗ್ಯೂ ಸೊರಬ ತಾಲ್ಲೂಕಿನಲ್ಲಿ ಎಗ್ಗು ಸಿಗ್ಗಿಲ್ಲದೆ ಇಂತಹ ನಾಶ ಪಡಿಸುವ ಹಂತಕ್ಕೆ ಕೈ ಹಾಕಿರುವುದು, ಅಂತವರಿಗೆ ಇಲಾಖೆಯವರು ಕೈಜೋಡಿಸಿರುವುದು ಹೇಯಕರ ಸಂಗತಿ, ಕೂಡಲೆ ತಪ್ಪಿತಸ್ಥರಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಪರಿಸರ ಸ್ನೇಹಿಗಳು, ಅನೇಕ ಕೃಷಿಕರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post