ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದ್ಯಾಭ್ಯಾಸದ ಮೂಲಕ ವಿಶ್ವವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನದ ಅರಿವು ಮಹತ್ವದ ಪಾತ್ರ ವಹಿಸುತ್ತದೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜ್ಞಾನೇಶ್ ಹೆಚ್. ಈ. ಹೇಳಿದರು.
ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ಪ್ರೌಢಶಾಲೆಯಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಹ್ಯಾಕಾಶ ವಿಶ್ವಕೋಶ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
“ವಿಜ್ಞಾನವು ವಿದ್ಯಾಭ್ಯಾಸದ ಒಂದು ಪ್ರಮುಖ ಅಂಗವಾಗಿದ್ದು, ವಿಜ್ಞಾನಕ್ಕೆ ಸಂಬಂಧಿಸಿದ ತತ್ವಗಳು, ಗ್ರಹಗಳು, ನಕ್ಷತ್ರಗಳು, ಗ್ಯಾಲಕ್ಸಿ, ಉಪಗ್ರಹಗಳು, ಮತ್ತು ಇತರ ವೈಜ್ಞಾನಿಕ ವಿಚಾರಗಳ ಬಗ್ಗೆ ಅರಿವು ಹೊಂದಿದಾಗ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯತ್ತ ಹೆಜ್ಜೆಹಾಕಲು ಸಾಧ್ಯ,” ಎಂದು ಅವರು ಹೇಳಿದರು.
Also read: ಶಿವಮೊಗ್ಗ | ನಿಮಗೆ ರೇಡಿಯೋ ಜಾಕಿ ಆಗುವ ಕನಸಿದೆಯೇ? ಹಾಗಾದರೆ ಇಲ್ಲಿದೆ ಅವಕಾಶ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ನಾಗರಾಜ್ ಎ.ಎಸ್., “ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಅಳವಡಿಸಿಕೊಂಡು, ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವಾಗ ಜೀವನ ಸಾರ್ಥಕವಾಗುತ್ತದೆ,” ಎಂದು ಹಿತೋಪದೇಶ ನೀಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ನಿರಂಜನ್ ಕುಪ್ಪಗಡ್ಡೆ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ವಿಜ್ಞಾನಕ್ಕೆ ಕುತೂಹಲ ಮೂಡಿಸಲು ಈ ಬಾಹ್ಯಾಕಾಶ ವಿಶ್ವಕೋಶ ಪುಸ್ತಕಗಳ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇಂಥ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡರೆ ರೋಟರಿ ಕ್ಲಬ್ಬಿನ ಕೊಡುಗೆ ಸಾರ್ಥಕವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶಶಿಕುಮಾರ್, ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ನಾಗರಾಜ್ ಗುತ್ತಿ, ಕೆ.ಬಿ. ಕೃಷ್ಣಪ್ಪ ಓಟೂರು, ಶಾಲೆಯ ಕಾರ್ಯದರ್ಶಿ ಎಲ್ಲೋಜೀ, ಸದಸ್ಯರಾದ ಚಂದ್ರಪ್ರ, ಮತ್ತು ಶಿಕ್ಷಕರಾದ ಮಧುಚಂದ್ರ, ಸ್ವಪ್ನ, ಶಿಲ್ಪಾ, ಮಂಜುನಾಥ್, ಆನಂದ್, ಮಾದೇಗೌಡ, ದೈಹಿಕ ಶಿಕ್ಷಕ ನಿಂಗನಗೌಡರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post