ಕಲ್ಪ ಮೀಡಿಯಾ ಹೌಸ್ | ಸೊರಬ |
ಕೊಲ್ಕತ್ತಾದ ಆರ್’ಜಿಕಾರ್ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಪಿಜಿ ಮೌಮಿತಾ ದೇಬಕಿತ್ ಅವರ ಕ್ರೂರ ಹತ್ಯೆಗೆ ಇಡೀ ಭಾರತದ ವೈದ್ಯಕೀಯ ಬಳಗ ಬೆಚ್ಚಿ ಬಿದ್ದಿದೆ ಎಂದು ಐಎಂಎ #IMA ತಾಲೂಕು ಘಟಕದ ಅಧ್ಯಕ್ಷ ಡಾ.ಎಂ.ಕೆ. ಭಟ್ ಆತಂಕ ವ್ಯಕ್ತಪಡಿಸಿದರು.
ಭಾರತೀಯ ವೈದ್ಯಕೀಯ ಸಂಘ, ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಆರೋಗ್ಯ ಇಲಾಖೆ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ತಹಶೀಲ್ದಾರ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

Also read: ಭೂಪರಿವರ್ತನೆ ಪ್ರಸ್ತಾವನೆಗೆ ತಾತ್ಕಾಲಿಕ ತಡೆ: ಈಶ್ವರ ಖಂಡ್ರೆ ಸೂಚನೆ
ಆರೋಪಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಐಎಂಎ ಪ್ರಧಾನ ಕಚೇರಿಯು ಭಾರತದ ಈ ಅಮೂಲ್ಯ ಮಗಳ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತದೆ. ಕ್ಯಾಂಪಸ್ ಒಳಗೆ ಈ ಅಪರಾಧವನ್ನು ನಿರ್ಭಯವಾಗಿ ಮಾಡಲು ಅನುವು ಮಾಡಿಕೊಟ್ಟ ಅಸ್ತಿತ್ವದಲ್ಲಿರುವ ಸನ್ನಿವೇಶಗಳನ್ನು ಖಂಡಿಸುತ್ತದೆ. ಕಲಿಕೆಯ ಕೋಟೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅದು ಅಡಳಿತದ ಅಸಮರ್ಥತೆಯನ್ನು ಮಾತ್ರ ಸೂಚಿಸುತ್ತದೆ ಎಂದು ಕಿಡಿ ಕಾರಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಂಜುಳ ಹೆಗಡಾಳ್, ತಾಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುರP್ಷÀತೆಯನ್ನು ಕಾಪಾಡಲು ತಕ್ಷಣ ಸಾರ್ವಜನಿಕ ಆಸ್ಪತ್ರೆ ಬಳಿ ಪೊಲೀಸ್ ಗಸ್ತು ಹಾಕಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಐಎಂಎ ತಾಲೂಕು ಕಾರ್ಯದರ್ಶಿ ಸೈಯದ್ ಹಾಶಂ, ವೈದ್ಯಾರುಗಳಾದ ಗೋಪಾಲಕೃಷ್ಣ, ಎಚ್.ಈ. ಜ್ಞಾನೇಶ್, ಪ್ರದೀಪ್ ಮಾಸನಕಟ್ಟಿ, ಪ್ರಭು ಸಾಹುಕಾರ್, ಮಹೇಶ ಮೂರ್ತಿ, ಸತೀಶ್, ಅಭಿಷೇಕ್, ಸಾವಿತ್ರಿ, ಅಮಿತ, ಸುಪ್ರಿಯಾ, ಶಿಲ್ಪಾ, ಲೋಹಿತ್, ಭರತ್, ಆಕಾಶ್, ಶಿವಕುಮಾರ್, ನದಾಫ್, ಶುಶ್ರುಷಾಧಿಕಾರಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಶುಶ್ರೂಷಕಿಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post