ಕಲ್ಪ ಮೀಡಿಯಾ ಹೌಸ್ | ಸೊರಬ |
ಮನುಷ್ಯನ ಮಾನಸಿಕ, ಬೌದ್ಧಿಕ ವಿಕಾಸಕ್ಕೆ ಸಾಹಿತ್ಯ ತುಂಬಾ ಪರಿಣಾಮಕಾರಿ, ತನ್ನೊಳಗಿನ ನೋವು, ನಲಿವುಗಳನ್ನು ಕಥೆ, ಕವನ, ಇತ್ಯಾದಿ ಪ್ರಕಾರಗಳಲ್ಲಿ ಅಭಿವ್ಯಕ್ತಪಡಿಸುವುದಕ್ಕೆ ಸಾಧ್ಯವಿದೆ, ಹಾಗಾಗಿ ಸಾಹಿತ್ಯವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ನೆಗವಾಡಿ ರಾಜಶೇಖರಪಾಟೀಲ್ ಹೇಳಿದರು.
ತಾಲ್ಲೂಕು ಮಟ್ಟದ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕವಿಗಳು ಕವನ ವಾಚಿಸಿದ್ದನ್ನು ವಿಶ್ಲೇಷಿಸಿದ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ ಜ್ನಾನೇಶ್, ಸಾಹಿತ್ಯ ವ್ಯಕ್ತಿಯ ಮಾನಸಿಕ ಸಮೃದ್ಧಿಯನ್ನು ಉನ್ಮಾದಿಸುವ ಶಕ್ತಿ. ಪ್ರಸ್ತುತ ಸಾಹಿತ್ಯದ ಮೂಲಕ ತಮ್ಮ ತುಮುಲವನ್ನು ಅಭಿವ್ಯಕ್ತಿಸುವ ಸಾಮರ್ಥ್ಯ ಯುವ ಕವಿಗಳಲ್ಲಿ ಹೆಚ್ಚುತ್ತಿರುವುದು ಸಂತಸದ ಸಂಗತಿ. ಸಾಹಿತ್ಯದ ಆಂತಯ೯ವನ್ನು ಅಭ್ಯಸಿಸಿ ಪೋಷಿಸುವ ಜವಾಬ್ದಾರಿ ಸಾಹಿತ್ಯಾಸಕ್ತರಲ್ಲಿ ಹೆಚ್ಚು ಬೆಳೆಯಬೇಕಾಗಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸೊರಬ, ಕನಾ೯ಟಕ ಜಾನಪದ ಪರಿಷತ್ತು ಸೊರಬ, ದಸರಾ ಉತ್ಸವ ಸಮಿತಿ ಹಾಗೂ ಗುರುಕುಲ ಎಜುಕೇಷನ್ ಟ್ರಸ್ಟ್ ಇವರ ಆಶ್ರಯದಲ್ಲಿ ಇಲ್ಲಿನ ಗುರುಕುಲ ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ನಡೆದ ಗೋಷ್ಠಿಯಲ್ಲಿ
ಕಸಾಸಾಂವೇ ಷಣ್ಮುಖಾಚಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಜಾಪ ಅಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಆಶಯ ನುಡಿಗಳನ್ನಾಡಿದರು. ಪುರಸಭೆ ಉಪಾಧ್ಯಕ್ಷರಾದ ಮಧುರಾಯ್ ಜೀ ಶೇಟ್, ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಗುತ್ತಿ, ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಜೋತಾಡಿ, ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಹುಣವಳ್ಳಿ, ಪುರ ಹಿರಿಯ ಎಚ್.ಎಸ್. ಮಂಜಪ್ಪ, ಪಾಣಿ ರಾಜಪ್ಪ, ಕವಯಿತ್ರಿ ರೇಣುಕಮ್ಮಗೌಳಿ, ಸಾಹಿತಿ ಮಂಜಪ್ಪ ಹುಲ್ತಿಕೊಪ್ಟ, ಗುರುಕುಲ ಸಂಸ್ಥೆಯ ಸತೀಶ್ ಬೈಂದೂರು, ಮೆಸ್ಕಾಂ ಎಇಇ ಕುಮುದಾ ಸುಶೀಲ್, ಉಧ್ಯಮಿ ಎಂ.ಎನ್. ಗುರುಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ಹಾಲೇಶ್ ನವುಲೆ, ಸವಿತಾ ಎಂ ಕೆ ಭಟ್, ಗೌರಮ್ಮ ಭಂಡಾರಿ, ಗಾಯಕ ಗುರುಮೂರ್ತಿ ಹೆಚ್, ಜನಪದ ಗಾಯಕ ರವಿ ಕಲ್ಲಂಬಿ, ಕವಿ ಮೋಹನ್ ಸುರಭಿ, ಕಲಾವಿದ ಸುಬ್ರಮಣ್ಯ ಗುಡಿಗಾರ್, ಅಜ್ವಲ್ ಹನೀಫ್, ಸರಸ್ವತಿ ನಾವುಡ, ಅರುಣ್ ಕುಮಾರ್, ರಾಘವೇಂದ್ರ, ಗಾಯಕ ವಿಜಯ್ ಬಾಂಬೋರೆ , ವಿನೋದ್ ವಾಲ್ಮೀಕಿ, ಮಹೇಶ್ ಖಾವಿ೯, ರೇವಣಪ್ಪ ಬಿದರಗೇರಿ, ಯುವ ಒಕ್ಕೂಟದ ಅಧ್ಯಕ್ಷ ಕೆ.ಲಿಂಗರಾಜಗೌಡ ಮುಂತಾದವರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post