ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತಹ ಅನೇಕ ಕಲಾವಿದರಿದ್ದು ಅವರಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ದೊರಕಿದರೆ ಖಂಡಿತ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಾರೆ. ಹಾಗಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ನೃತ್ಯದ ಬಗ್ಗೆ, ಸಂಗೀತದ ಬಗ್ಗೆ ತರಬೇತಿ ಅವಶ್ಯವಿದೆ ಎಂದು ಕೇಂದ್ರ ಸಾಂಸ್ಕೃತಿಕ ರಾಯಭಾರಿ ಅಶ್ವಥ್ ಹರಿತಸ್ಸ್ ಹೇಳಿದರು.
ತಾಲ್ಲೂಕು ಕೋಟಿಪುರದ ಎವರಾನ್ ಸ್ಕೂಲ್ ಲ್ಲಿ ಆಯೋಜಿಸಿದ್ದ ಸಂಗೀತ ಮತ್ತು ಭರತನಾಟ್ಯದ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಯಾವುದೇ ರೀತಿಯ ಕಲಾಭವನ ಇಲ್ಲದೆ ಇರುವುದರಿಂದ ಸರ್ಕಾರ ತಾಲ್ಲೂಕಿಗೆ ಕಲಾ ಮಂದಿರವನ್ನು ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಈ ವೇಳೆ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಎವರಾನ್ ಸ್ಕೂಲ್ ಮೊದಲಿನಿಂದಲೂ ಕಲೆಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಕೇಂದ್ರ ಸಾಂಸ್ಕೃತಿಕ ರಾಯಭಾರಿ ಅಶ್ವಥ್ ಹರಿತಸ್ಸ್ ಅವರಿಂದ ಭರತನಾಟ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ದೊರಕಿದ್ದು ನಾಟ್ಯದ ಬಗ್ಗೆ ಇದ್ದ ಕಲ್ಪನೆಯೆ ಬ
ಎವರಾನ್ ಸ್ಕೂಲ್ ನ ಮುಖ್ಯಸ್ಥ ಕಾರ್ತಿಕ್ ಸಾಹುಕಾರ್, ಚರಿತ ಕಾರ್ತಿಕ್, ಅದ್ಯಾಪಕ ವೃಂದದ ಶಿಫಾನ್, ಭರಮ ರೆಡ್ಡಿ, ಕನಕರಾಜ್, ಯಲ್ಲಪ್ಪ, ಬಸವರಾಜ ಹಾಗೂ ಭರತನಾಟ್ಯ ತರಬೇತುದಾರ ಪುರುಷೋತ್ತಮ್ ಇದ್ದರು.
ವಿದ್ಯಾರ್ಥಿ ವಿಶ್ವ, ಕೆ.ಎಂ, ಸಿದ್ದೇಶ್, ನಾಗವೇಣಿ ಹಾಗೂ ರಿದಾ ಪ್ರಾರ್ಥಿಸಿದರು, ರಕ್ಷಿತಾ ಯು. ಬಿ. ಸ್ವಾಗತಿಸಿದರು. ಸಂಜನಾ ವಂದಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post