ಕಲ್ಪ ಮೀಡಿಯಾ ಹೌಸ್ | ಸೊರಬ |
ಭೂಮಿಯ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಅದು ನಮಗೆ ಸ್ವಸ್ಥ ಆರೋಗ್ಯವನ್ನು ಒದಗಿಸಿಕೊಡುತ್ತದೆ. ಜೀವವೈವಿಧ್ಯತೆಯ ಪೋಷಣೆಯ ಜೊತೆಗೆ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ಶ್ರೀನಿವಾಸಪುರದ ಸಹಜ ಕೃಷಿಕ ಐಕಾಂತಿಕ ರಾಘವ ಹೇಳಿದರು.
ತಾಲ್ಲೂಕು ಯಲಸಿ ಸುವರ್ಣವನದಲ್ಲಿ ಸಹಜ ಕೃಷಿಕರ ಬಳಗ ಶಿವಮೊಗ್ಗ ಇವರು ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಸಹಜ ಕೃಷಿ ಕಾರ್ಯಾಗಾರದಲ್ಲಿ ವಿಷಮುಕ್ತ ಆಹಾರ ಬೆಳೆಯುವ ವಿಧಾನ, ತೂರು ಬಿತ್ತನೆಯ ಪದ್ಧತಿ ಕುರಿತು ಮಾತನಾಡಿದರು.
ಸಮುದಾಯ ಬೀಜ ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಬಿ. ಎಂ. ಮಲ್ಲಿಕಾರ್ಜುನ್ ಮಾತನಾಡಿ, ವಿಷರಹಿತ ಹಲವು ತರಕಾರಿ, ಧಾನ್ಯಗಳ ಬೀಜಗಳನ್ನು ಪ್ರಸರಿಸುವ ಜೊತೆಗೆ ಬೀಜ ಸಂರಕ್ಷಿಸುವ ಕಾರ್ಯದಲ್ಲಿ ಕೃಷಿಕರು ಕೈಜೋಡಿಸಬೇಕು ಎಂದರು.
ಕೃಷಿಯಲ್ಲಿ ಜೇನಿನ ಮಹತ್ವ ದ ಕುರಿತು ಗೌತಮಬಿಚ್ಚುಗತ್ತಿ ಪ್ರಾತ್ಯಕ್ಷಿಕೆ ನೀಡಿ, ಹಾವು ಮತ್ತು ನಾವು ಕುರಿತ ಉರಗ ಸಂರಕ್ಷಣೆಯ ಮಹತ್ವ, ವಿಧಾನ, ಕಡಿದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆಯ ಕುರಿತು, ಕಸಿ ಕಟ್ಟುವ ವಿಧಾನದ ಬಗ್ಗೆ, ಮಿತ ನೀರು ಬಳಕೆಯ ಸ್ಮಾರ್ಟ್ ಇರಿಗೇಶನ್ ತಂತ್ರಜ್ಞಾನದ ಮಾಹಿತಿ ಹಂಚಿಕೊಂಡರು.
ಚೌಕಾಬಾರ ತರಕಾರಿ ಏರುಮಡಿ ಪ್ರಾತ್ಯಕ್ಷಿಕೆ ಯಲ್ಲಿ ಜೆ. ಹೊಯ್ಸಳ ಯಲಸಿ, ಈಶ್ವರ್ ಹಿತ್ತಲ, ಮನೋಜ್ ಶಿವಮೊಗ್ಗ, ಪ್ರಶಾಂತ್ ಹೊಸನಗರ, ಚೇತನ್ ಕೆಂಬಾಲ ಪಾಲ್ಗೊಂಡು ಏರುಮುಡಿ ವಿಧಾನ ವಿವರಿಸಿದರು.
ವಿಷಮುಕ್ತ ಸ್ವಚ್ಛತಾ ವಸ್ತುಗಳ ತಯಾರಿಕೆ, ಬಳಕೆ ಹಾಗೂ ಮಹತ್ವವನ್ನು ಭಾಸ್ಕರ್ ಕೆಂಚನಾಳ, ಮಲೆನಾಡ ನಾಟಿ ತಳಿ ಬೀಜಗಳನ್ನು ಸಾವಿತ್ರಮ್ಮ ಬಿಚ್ಚುಗತ್ತಿ ಪರಿಚಯಿಸಿದರು. ಮಲ್ಲಿಕಾರ್ಜುನ ರಾಮೇಶ್ವರ, ಪಾಂಡುರಂಗ ಮಲೇಬೆನ್ನೂರು, ಸಂಗಮ್ ಶಿವಮೊಗ್ಗ, ಶ್ರೀಧರ್ ಕೊರಗಿ, ಲೋಕೇಶ್ ಕಂಚಾಳಸರ, ಹರೀಶ್ ಬಾಬು ಅಂತರಗಂಗೆ ಇವರುಗಳು ನಾಟಿ ತರಕಾರಿ ಬೀಜಗಳನ್ನು ಬ್ಯಾಂಕ್ ಗೆ ನೀಡಿದರು.
ಹಾವೇರಿ ಜಿಲ್ಲಾ ಸಹಜ ಕೃಷಿ ಬಳಗದವರು, ಐಕಾಂತಿಕಾ ಬಳಗದ ಪಾಂಡುರಂಗ, ವೀರೇಶ, ಜಬಿಯುಲ್ಲ, ಹನುಮಂತ, ಔಷಧೀಯ ಸಸ್ಯಗಳ ಸಂರಕ್ಷಕ ಪ್ರಕಾಶ್ ಮಂಚಾಲೆ, ಬಿಎನ್ಸಿ ರಾವ್, ಹೊಳೆಮರೂರು ಗಂಗಾಧರಗೌಡ, ಕಲಾವಿದ ಶರತ್ ಶಿವಮೊಗ್ಗ, ಜೆ.ಎಸ್.ಚಿದಾನಂದ ಗೌಡ, ರಾಜೇಂದ್ರಜೈನ್, ರಜನಿ ಬಿ.ಗೌಡ, ಮಧುರಾಂ, ಕೋಣನಕಟ್ಟೆ ಶ್ರೀಪಾದ, ಯಲಸಿ ರಾಜೇಶ್ವರಿ, ವಸುಧಾ, ಗೀತಾ ಬರಗಿ, ಸಂತೋಷ್ ಕೊರಗಿ, ಮಂಜುನಾಥ ಸಾರೆಕೊಪ್ಪ, ರಾಮಣ್ಣ ತವನಂದಿ ಸಂವಾದದಲ್ಲಿ ಪಾಲ್ಗೊಂಡರು.
ಸಹಜ ಕೃಷಿ ಬಳಗದ ಅನೇಕ ರೈತಮಹಿಳೆಯರು, ಐಕಾಂತಿಕ, ಬಿಚ್ಚುಗತ್ತಿ , ಜೋಯ್ಸ್ ಕುಟುಂಬದವರು, ಕೃಷಿಕರು ಪಾಲ್ಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post