ಕಲ್ಪ ಮೀಡಿಯಾ ಹೌಸ್ | ಸೊರಬ |
ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ನಿಮ್ಮ ಐಪಿ ಸೆಟ್ ನ್ನು ನೊಂದಾಯಿಸಿಕೊಳ್ಳಿ. ಆಗ ನಮಗೆ ಸಮರ್ಪಕವಾಗಿ ವಿದ್ಯುತ್ ನೀಡಲು ಸಾಧ್ಯ ಎಂದು ಶಾಸಕ ಕುಮಾರ್ ಬಂಗಾರಪ್ಪ MLA Kumar Bangarappa ಹೇಳಿದರು.
ತಾಲ್ಲೂಕಿನ ವಿವಿದೆಡೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು ಯಲಸಿ ಗ್ರಾಮದ ಒಂದು ಕೋಟಿ ರೂ. ವೆಚ್ಚದ ಸಂಪರ್ಕ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Also read: 5 ವರ್ಷಗಳಲ್ಲಿ ಜಿಲ್ಲೆಗೊಂದು ಅತ್ಯುತ್ಕೃಷ್ಟ ಎಂಜಿನಿಯರಿಂಗ್ ಕಾಲೇಜು: ಸಚಿವ ಅಶ್ವತ್ಥ್ ನಾರಾಯಣ್ ಗುರಿ
ಯಾವುದೇ ಯೋಜನೆಗಳು ಜನತೆಗೆ ಸಂಪೂರ್ಣವಾಗಿ ತಲುಪಲು ಎಲ್ಲರ ಸಹಕಾರ ಮುಖ್ಯ. ಬೇಧ ಮರೆತು ಉತ್ತಮ ಕಾರ್ಯ ನಡೆಸಲು ಗ್ರಾಮಸ್ಥರು ಸಹಕರಿಸಬೇಕು ಎಂದರು.

ವಿವಿಧ ಇಲಾಖೆ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು, ಪಕ್ಷ ಪ್ರಮುಖರು, ಯಲಸಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post