ಕಲ್ಪ ಮೀಡಿಯಾ ಹೌಸ್ | ಸೊರಬ |
ಎಲ್ಲ ಸಮುದಾಯದವರಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಗೆಗಳಿಗೆ ಪೂರಕವಾಗುವಂತೆ ಪಟ್ಟಣದ ಸನಂ. 8ರಲ್ಲಿ ಸುಮಾರು 52 ಎಕರೆ ಜಾಗವನ್ನು ಕಾಯ್ದಿರಿಸಲಾಗಿದ್ದು ಆಯಾ ಸಮುದಾಯಕ್ಕೆ ಅನುಗುಣವಾಗಿ 1.5 ಎಕರೆ ಜಾಗವನ್ನು ನೀಡಲು ಉದ್ಧೇಶಿಸಲಾಗಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗನಾಥ ದೇವಾಲಯದ ಪಕ್ಕ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶ್ರೀ ರಂಗ ಕನ್ವೆನ್ಷನ್ ಹಾಲ್ ಉದ್ಘಾಟಿಸಿ ಮಾತನಾಡಿದರು.ಈ ಕನ್ವೆನ್ಷನ್ ಹಾಲ್ ಹವಾನಿಯಂತ್ರಿತವಾಗಿದ್ದು, ಎಲ್ಲ ಸ್ತರದ ಜನತೆಗೂ ನೆರವಾಗುವಂತೆ ವಿನ್ಯಾಸ ರೂಪಿಸಲಾಗಿದೆ. ಸುಮಾರು 2 ಕೋಟಿ ವೆಚ್ಚ ಭರಿಸಿ ಹಾಲ್ ಸಿದ್ಧಗೊಂಡಿದ್ದು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ ಪೂರಕವಾಗಿ ತೆರವು ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೆ ದ್ವಿಪಥ ರಸ್ತೆ ಸಿದ್ಧವಾಗುತ್ತದೆ. ಈ ಹಿಂದೆ ನಿರ್ಮಾಣಗೊಂಡ ರಂಗಮಂದಿರವನ್ನು 3 ಕೋಟಿ ವೆಚ್ಚ ಭರಿಸಿ ನವೀಕರಿಸಲು ಮುಂದಾಗಿದ್ದು, ಡಾ.ರಾಜಕುಮಾರ್ ಕಲಾಮಂದಿರವೆಂದು ಹೆಸರಿಡಲು ಉದ್ಧೇಶಿಸಲಾಗಿದೆ ಎಂದರು.ಪುರಸಭೆ ಅಧ್ಯಕ್ಷ ವೀರೇಶ್ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ಪುರಸಭೆಯ ಉಪಾಧ್ಯಕ್ಷ ಮಧುರಾಯಶೇಟ್, ಪದಾಧಿಕಾರಿ ಸದಸ್ಯರುಗಳು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಕಾರ್ಯದರ್ಶಿ ಕಡಸೂರು ಶಿವಕುಮಾರ್, ಪಕ್ಷ ಪ್ರಮುಖರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post