ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಸಾಹಿತ್ಯ ಸಮ್ಮೇಳನ ಕನ್ನಡದ ಹಬ್ಬವಾಗಿದ್ದು ಎಲ್ಲರೂ ಆಚರಿಸುವಂತಾಗಬೇಕು. ತಾಲೂಕಿನ ಸೊಗಡು, ವೈಭವ, ಸಮಸ್ಯೆಯನ್ನು ನಾಡಿಗೆ ಪರಿಚಯಿಸುವ ವೇದಿಕೆ ಯಾಗಬೇಕು ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಂ.ಕೆ. ಭಟ್ ಹೇಳಿದರು.
ಪಟ್ಟಣದ ಜೈಮಾತಾ ಕ್ಲಿನಿಕ್ ಆವರಣದಲ್ಲಿ ಕಸಾಪ ವತಿಯಿಂದ ಜಡೆಯಲ್ಲಿ ನಡೆಯಲಿರುವ ತಾಲೂಕು 8ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಅಧಿಕೃತ ಆಮಂತ್ರಣ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕು, ನಾಡಿಗೆ ದಿಕ್ಕೂಚಿಯಾಗುವ ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಾತಿ, ಮತ, ವರ್ಣ ಹೊರತಾದ ಸಮಾಜ ನಿರ್ಮಾಣವಾಗಬೇಕು. ಅದು ಸಾಹಿತ್ಯ ಓದಿನಿಂದ ಸಾಧ್ಯ. ಕುವೆಂಪು ಕಲ್ಪನೆಯ ಸಮಾಜ ನಿರ್ಮಾಣವಾಗುವಂತಹ ನಿಟ್ಟಿನಲ್ಲಿ ಸಮ್ಮೇಳನಗಳು ನಡೆಯಬೇಕು ಎಂದರು.
ಸಹಕಾರಿ ಧುರೀಣ ಎಚ್.ಎಸ್. ಮಂಜಪ್ಪ, ಕಸಾಪ ಜಡೆ ಘಟಕದ ಅಧ್ಯಕ್ಷ ಮೃತ್ಯುಂಜಯ ಗೌಡ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಯವರು ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಂ.ಕೆ. ಭಟ್ ಅವರನ್ನು ಸನ್ಮಾನಿಸಿದರು. ಕಸಾಪ ನೂತನ ಅಧ್ಯಕ್ಷ ಮಧುರಾಯ್ ಜಿ.ಶೇಟ್ ಅಧ್ಯಕ್ಷತೆ ವಹಿಸಿದ್ದರು.
ಸವಿತಾ ಎಂ.ಕೆ. ಭಟ್, ಕಸಾಪ ನಿಕಟಪೂರ್ವ ಅಧ್ಯಕ್ಷ ಹಾಲೇಶ್ ನವುಲೆ, ಜಿಪಂ ಸದಸ್ಯ ಶಿವಲಿಂಗೇ ಗೌಡ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಯು.ಎಂ. ನಟರಾಜ್, ಸಮ್ಮೇಳನದ ಸಂಚಾಲಕ ವೀರೇಂದ್ರಕುಮಾರ್, ಉಳವಿ ಘಟಕದ ಅಧ್ಯಕ್ಷ ಶಿವಕುಮಾರ್, ಡಾ. ವಿಶ್ವನಾಥ ನಾಡಿಗೇರ ಡಾ. ಎಚ್.ಇ. ಜ್ಞಾನೇಶ್, ಪಾಣಿ ರಾಜಪ್ಪ ಶಿವಾನಂದ ಪಾಣಿ, ಕೃಷ್ಣಾನಂದ್, ಪಪಂ ಸದಸ್ಯರಾದ ಡಿ.ಎಸ್. ಪ್ರಸನ್ನ ಕುಮಾರ್ ದೊಡ್ಡನೆ, ಯು, ನಟರಾಜ್, ಪ್ರಭುಮೇಸ್ತ್ರಿ ಆಫ್ರಿನ್ ಇತರರಿದ್ದರು. ಕವನಾ ಮತ್ತು ಸಂಜನಾ ಪ್ರಾರ್ಥಿಸಿ ಕಸಾಪ ಗೌರವ ಕಾರ್ಯದರ್ಶಿಗಳಾದ ಪ್ರಶಾಂತ್ ಹುನವಳ್ಳಿ ಸ್ವಾಗತಿಸಿ, ಮಂಜಪ್ಪ ಹುಲಿಕೊಪ್ಪ ನಿರೂಪಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post