ಕಲ್ಪ ಮೀಡಿಯಾ ಹೌಸ್ | ಸೊರಬ |
ಹವಾಮಾನ ವೈಪರೀತ್ಯಗಳ ನಡುವೆ ಬೆಳೆ ಬೆಳೆದ ರೈತನಿಗೆ ಬೆಲೆಯಿರಲಿ ಬೆಳೆಯೂ ದೊರಕದಂತಾಗಿದೆ ಎಂದು ಕಾರಿಗನೂರು ತೇಜಸ್ವಿನಿ ಪಟೇಲ್ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು ಸಮನವಳ್ಳಿ ಗ್ರಾಮದಲ್ಲಿ ಸಾಗರ ಉಳ್ಳೂರು ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯ ಏರ್ಪಡಿಸಿದ್ದ ರಾಸೇಯೋ ವಿಶೇಷ ಶಿಬಿರದಲ್ಲಿ ಅವರು ಕೃಷಿ ಸವಾಲುಗಳು ಮತ್ತು ಪರಿಹಾರಗಳು ಕುರಿತು ಉಪನ್ಯಾಸ ನೀಡಿದರು.
ಪೂರ್ವದಿಂದಲೂ ರೈತನ ತತ್ಪರತೆ, ಶ್ರಮಕ್ಕೆ ನಿರೀಕ್ಷಿಸಿದಷ್ಟು ಬೆಳೆ ಮತ್ತು ಬೆಲೆ ದೊರಕಲಾರದು. ಆದರೆ, ತೃಪ್ತಿ ನೆಮ್ಮದಿಯ ಜೀವನವಿತ್ತು. ಜಾಗತಿಕ ಮಾರುಕಟ್ಟೆಯ ಭರಾಟೆಯ ನಡುವೆ ಹೊಂದಾಣಿಕೆಯಾಗದ ರೈತ ಹಂತಹಂತವಾಗಿ ಬದಲಾಗಬೇಕಾಗಿರುವುದು ಅನಿವಾರ್ಯವಾಗಿದೆ. ಕೃಷಿಯಲ್ಲಿ ವೈಜ್ಞಾನಿಕ ವಿವೇಚನೆ ಅವಶ್ಯ ಎಂದಾದರೂ ಭೂಮಿಯ ಆರೋಗ್ಯದ ಬಗ್ಗೆಯೂ ಆತ ಯೋಚಿಸಬೇಕಿದೆ. ಯುವಜನತೆ ಕೃಷಿಯತ್ತ ಮುಖ ಮಾಡಬೇಕಿದೆ. ಮಾರುಕಟ್ಟೆಗೆ ಪೂರಕವಾಗಿ ಗುಣಮಟ್ಟದ ಸುಧಾರಿತ ಕೃಷಿ ಉತ್ಪನ್ನಗಳನ್ನು ನೀಡುವ ಮಟ್ಟಕ್ಕೆ ಆತ ಹೆಜ್ಜೆ ಇಡಬೇಕಿದೆ ಎಂದರು.
Also read: ವಿನಾಶಕಾಲೇ ವಿಪರೀತ ಬುದ್ಧಿ! ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್’ಡಿಕೆ ಕಿಡಿ
ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಎನ್.ಬಿಳಿಗಲ್ಲೂರು ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜು ಪ್ರಾಚಾರ್ಯ ಎಂ.ಪಿ. ವಿಜಯಕುಮಾರ್, ಪ್ರೊ.ಪಂಚಾಕ್ಷರಯ್ಯ, ಡಾ.ಜ್ಞಾನೇಶ್, ಚಂದ್ರೇಗೌಡ, ಕೃಷ್ಣಮೂರ್ತಿ ಎಂ.ವಿ., ಬಿ.ಪಿ. ರುದ್ರೇಶಪ್ಪ, ಪಿ. ಮಂಜೋಜಿರಾವ್, ಚಂದ್ರಶೇಖರ್ ಕಾಂಜನ್, ಶಿಬಿರಾರ್ಥಿಗಳು, ಗ್ರಾಮಸ್ಥರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post