ಕಲ್ಪ ಮೀಡಿಯಾ ಹೌಸ್ | ಸೊರಬ |
‘110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ಸೊರಬದಲ್ಲಿ ಫೀಡರಗಳ ಹಳೆಯ ಕಂಬಗಳನ್ನು ಬದಲಾಯಿಸುವ ಕಾಮಗಾರಿಯನ್ನು ನಡೆಸಲು ಉದ್ದೇಶಿಸಿರುವುದರಿಂದ ಡಿ.16ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಈ ಕೆಳಗಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಎಫ್-5 ದೇವತಿಕೊಪ್ಪ, ಎಫ್-6 ಹಾಲಗಳಲೆ, ಎಫ್-7 ತಲೆಬೈಲು, ಎಫ್-8 ಕುಪ್ಪೆ, ಎಫ್-9 ಬಿಳಾಗಿ, ಎಫ್-II ಮಂಚೆ, ಎಫ್-12 ಉರಗನಹಳ್ಳಿ, ಎಫ್-13 ಅಂಡಿಗೆ, ಎಫ್-14 ಕೊಡಕಣಿ ಫೀಡರ್‌ಗಳು ಮತ್ತು ಎಪಿಎಂಸಿ ಹಾಗು ಕೆಪಿಟಿಸಿಎಲ್ ಸ್ಥಾವರದ ಆವರಣ ಸುತ್ತಮುತ್ತ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಈ ಕುರಿತು ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post