ಕಲ್ಪ ಮೀಡಿಯಾ ಹೌಸ್ | ಸೊರಬ |
ನಾಡೋಜ ಚನ್ನವೀರ ಕಣವಿ ಅವರು ಕನ್ನಡ ನಾಡಿನ ಬಹು ದೊಡ್ಡ ಆಸ್ತಿ. ನಾಡು ನುಡಿಯ ಸೇವೆ ಸೇರಿದಂತೆ ಕನ್ನಡದ ಉಸಿರೇ ಆಗಿದ್ದರು. ಇಂಥಾ ಮಹನೀಯರನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದು ಕನ್ನಡ ಸಾಂಸ್ಕೃತಿಕ ಜಗಲಿ ಅಧ್ಯಕ್ಷ ಮಂಜಪ್ಪ ಹುಲ್ತಿಕೊಪ್ಪ ಹೇಳಿದರು.

ಪಟ್ಟಣದ ಗುರುಕುಲ ವಿದ್ಯಾ ಸಂಸ್ಥೆಯ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ, ಹಾಗೂ ತಾಲ್ಲೂಕು ಸುಗಮ ಸಂಗೀತ ಪರಿಷತ್ತು ಮತ್ತು ಗುರುಕುಲ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ನಾಡೋಜ ಚನ್ನವೀರ ಕಣವಿಯವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಗಲಿಯ ಗೌರವ ಸಂಚಾಲಕ ಎನ್ ಷಣ್ಮುಖಾಚಾರ್, ಕಸಾಪ ಮಾಜಿ ಅಧ್ಯಕ್ಷ ಹಾಲೇಶ್ ನವುಲೆ, ಜಗಲಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಗುಡಿಗಾರ್, ಗುರುಕುಲ ಸಂಸ್ಥೆಯ ಸತೀಶ್ ಗುರೂಜಿ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಜೋತಾಡಿ ಮೊದಲಾದವರು ಚನ್ನವೀರ ಕಣವಿಯವರ ಬದುಕುಬರಹ, ಅವರ ಕನ್ನಡ ಸೇವೆಯ ಕುರಿತಂತೆ ಮಾತನಾಡಿದರು.

ತಾಲ್ಲೂಕು ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ, ಗಾಯಕ ಹೆಚ್ ಗುರುಮೂರ್ತಿ, ಗಾಯಕ ವಿಜಯ್ ಕುಮಾರ್ ಬಾಂಬೋರೆ, ಮೋಹನ್ ಸುರಭಿ ಚನ್ನವೀರ ಕಣವಿಯವರ ಗೀತೆಗಳನ್ನು ಹಾಡುವ ಮೂಲಕ ಅಗಲಿದ ಗಣ್ಯರಿಗೆ ಗೀತನಮನ ಸಲ್ಲಿಸಿದರು. ಗುರುಕುಲ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನೆಚ್ಚಿನ ಕವಿಯ ನುಡಿನಮನದಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post