ಕಲ್ಪ ಮೀಡಿಯಾ ಹೌಸ್ | ಸೊರಬ |
ಪಂಡಿತ್ ದೀನ್ ದಯಾಳ್ ಸಂಶೋಧನಾ ಸಂಸ್ಥೆ ನವದೆಹಲಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಸಹಯೋಗದೊಂದಿಗೆ ಸುಜಲಂ-ಜಲತತ್ವ ಕುರಿತ ಪಂಚಭೂತಗಳು ಮತ್ತು ಪರಿಸರದ ಭಾರತೀಯ ಚಿಂತನೆಗಳು ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ಹಂಪಿ ವಿವಿ ಮಂಟಪ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಜರುಗಿತು.
ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಗಳಾಗಿ ಪಾಲ್ಗೊಂಡ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ. ಕುಮಾರಸ್ವಾಮಿ ಇಕಾಲಜಿ ಮತ್ತು ಹೈಡ್ರಾಲಜಿ ವಿಷಯ, ರಾಜ್ಯ ಜೀವವೈವಿಧ್ಯ ಮಂಡಳಿಯ ಎಕ್ಸ್ಪರ್ಟ್ ಕಮಿಟಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ವಾಟರ್ ರಿಸೋರ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಇನ್ ವಿಜಯನಗರ ಎಂಪೈರ್ ವಿಷಯ ಕುರಿತು, ಸರ್ವೋದಯ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಟ್ರಸ್ಟೀ ಪ್ರಶಾಂತ್ ಹೆಚ್.ಎಂ. ರೋ ಆಫ್ ಸ್ಟ್ಯಾಕ್ ಹೋಲ್ಡರ್ ಇನ್ ವಾಟರ್ ಮ್ಯಾನೇಜ್ಮೆಂಟ್ ಕುರಿತು ಪ್ರಬಂಧ ಮಂಡಿಸಿದರು.
ರಾಜ್ಯದ ಶಿರಸಿಯ ಶಿವಾನಂದ ಕಳವೆ, ಹುಬ್ಬಳ್ಳಿ ಪ್ರಕಾಶ್ ಭಟ್, ತುಮಕೂರು ಪದ್ಮಪ್ರಸಾದ, ಪುತ್ತೂರು ತಾರಾನಾಥ್ ವರ್ಕಾಡಿ, ಹಂಪಿ, ಬಳ್ಳಾರಿ ವಿವಿಯ ಉಪನ್ಯಾಸಕರು ಹಾಗೂ ವಿವಿಧ ರಾಜ್ಯದ ಮೂವತ್ತಕ್ಕೂ ಹೆಚ್ಚಿನ ವಿದ್ವಾಂಸರು ಜಲತತ್ವದ ಕುರಿತು ವಿಷಯ ಮಂಡಿಸಿದರು.
ಬಳ್ಳಾರಿ ವಿವಿ ಕುಲಪತಿ ಪ್ರೊ. ಸಿದ್ಧು ಆಲಗೂರ್ ಅಧ್ಯಕ್ಷತೆ ವಹಿಸಿದ್ದರು.
Also read: ಸಾಗರ ಗ್ರಾಮಾಂತರದಲ್ಲಿ ಸಾಲು ಸಾಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹಾಲಪ್ಪ ಭೂಮಿ ಪೂಜೆ
ಬಳ್ಳಾರಿ ವಿವಿ ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್ ಸ್ವಾಗತಿಸಿದರು. ವಿಚಾರ ಸಂಕಿರಣದ ಪ್ರಾಸ್ತಾವಿಕ ನುಡಿಯನ್ನು ದೀನದಯಾಳ್ ಸಂಶೋಧನಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಥುಲ್ ಜೈನ್, ದೀನ್್ದಯಾಳ್ ಉಪಾಧ್ಯ ಅಧ್ಯಯನ ಕೇಂದ್ರದ ಕುರಿತ ಪ್ರಾಸ್ತಾವಿಕ ನುಡಿಯನ್ನ ಕನ್ನಡ ವಿವಿ ಕುಲಪತಿ ಸ.ಚಿ.ರಮೇಶ್, ವಂದನಾರ್ಪಣೆಯನ್ನ ಬಳ್ಳಾರಿ ವಿವಿ ಕುಲಸಚಿವ ಪ್ರೊ.ರಮೇಶ್ ಓ ಓಲೆಕರ್, ಪರಿಚಯ, ನಿರೂಪಕರಾಗಿ ಪ್ರೊ. ಕುಮಾರ್, ಡಾ.ಅರ್ಚನಾ, ಸಂಕಿರಣ ಕುರಿತ ಆಶಯ ನುಡಿಯನ್ನ ಶ್ರೀಪಾದ ಬಿಚ್ಚುಗತ್ತಿ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post