ಕಲ್ಪ ಮೀಡಿಯಾ ಹೌಸ್ | ಸೊರಬ |
ಇಂದಿನ ಅಂತರ್ಜಾಲದಲ್ಲಿ ಬೌದ್ಧಿಕ ವಿಕಾಸಕ್ಕೆ ಪೂರಕವಾದ ಎಷ್ಟು ಮಾಹಿತಿಯಿದೆಯೋ ಅಷ್ಟೆ ಪ್ರಮಾಣದಲ್ಲಿ ಯುವಜನಾಂಗವನ್ನು ಹಾದಿ ತಪ್ಪಿಸುವ ಮಾಹಿತಿಯೂ ಇದೆ. ಸತ್ವವನ್ನು ಹೆಕ್ಕಿಕೊಂಡು, ಅಸತ್ವವನ್ನು ದೂರವಿಡುವ ನಿಟ್ಟಿನಲ್ಲಿ ಪೋಷಕರ ಮತ್ತು ಶಿಕ್ಷಕರ ಜವಾಬ್ಧಾರಿ ಅಗತ್ಯವಿದೆ ಎಂದು ಪೊಲೀಸ್ ಇಲಾಖೆಯ ನಾಗರಾಜ್ ಹೇಳಿದರು.
ತಾಲ್ಲೂಕು ತವನಂದಿ ಮಲೆನಾಡು ಪ್ರೌಢಶಾಲೆಯಲ್ಲಿ ಸೈಬರ್ ಸುರಕ್ಷತೆ ಜಾಗೃತಿ ಹಾಗೂ ಇತಿಹಾಸ ಸುತ್ತಮುತ್ತ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಶಿಕ್ಷಕರನ್ನುದ್ಧೇಶಿಸಿ ಮಾತನಾಡಿ, ಪೊಲೀಸ್ ಇಲಾಖೆಯ ಸಲ್ಮಾನ್ ಖಾನ್ ಸೈಬರ್ ಅಪರಾಧ, ಶಿಕ್ಷೆ, ಮುಂಜಾಗೃತೆ ಕುರಿತಂತೆ ಮಾಹಿತಿ ನೀಡಿದರು.

ಇತಿಹಾಸ ಸುತ್ತಮುತ್ತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಸೊರಬ ಕಾನು ಇತಿಹಾಸದ ಬಗ್ಗೆ ಮಾತನಾಡಿ, ಪೂರ್ವಿಜರು ನಮಗಾಗಿ ಉಳಿಸಿಟ್ಟಿದ್ದನ್ನು ಮುಂಪೀಳಿಗೆಯ ನಿಮಗೆ ಉಳಿಸಲಾಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ತಾಲ್ಲೂಕು ಇತಿಹಾಸದ ಪ್ರಾಮುಖ್ಯತೆ, ವೈಶಿಷ್ಟ್ಯತೆ ಕುರಿತಂತೆ ವಿದ್ಯಾರ್ಥಿಗಳ ಕುತೂಹಲಕ್ಕೆ ಆಧಾರಬದ್ಧ ಮಾಹಿತಿ ಒದಗಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಅಶೋಕ್ ಟೇಮ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ತಂಡ ಪ್ರಾರ್ಥಿಸಿ, ಶಿಕ್ಷಕಿ ವಿ.ಎಸ್. ಸಂಗೀತ ಸ್ವಾಗತಿಸಿದರು. ಕೆ. ಪವಿತ್ರ ನಿರೂಪಿಸಿ, ಕೆ.ಬಿ. ಹರೀಶ್ ವಂದಿಸಿದರು. ಶಾಲಾ ಸಹಶಿಕ್ಷಕ ಧರ್ಮೇಂದ್ರ, ದೀಪಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















