ಕಲ್ಪ ಮೀಡಿಯಾ ಹೌಸ್ | ಸೊರಬ |
ನಿಮ್ಮ ಕನಸಿನ ಕೂಸುಗಳಾದ ನಿಮ್ಮ ಮಕ್ಕಳು ಭವಿಷ್ಯದ ಸಂಕೇತ ಮಾತ್ರವಲ್ಲ, ಬಿಳಿ ಹಾಳೆಯಂತಿದ್ದು, ಅವರನ್ನು ಸಂಸ್ಕಾರಯುತವಾಗಿ ಮಾತ್ರವಲ್ಲ ಸಮಾಜಕ್ಕೆ ಪೂರಕವಾಗಿ ಪೋಷಕರು ಬೆಳೆಸಬೇಕು ಎಂದು ಪ್ರಮುಖರಾದ ಎಂ.ಪಿ. ಕೃಷ್ಣಮೂರ್ತಿ ಕರೆ ನೀಡಿದರು.
ಪಟ್ಟಣದ ಖ್ಯಾತ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್’ನ ಶೈನಿಂಗ್ ಸ್ಟಾರ್ ಕಿಡ್ಸ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also Read>> ‘ನನ್ನ ಗೋಪಾಲ’, `ರಾವಣ ದರ್ಶನಂ’ ನಾಟಕಗಳು | ಗೆದ್ದ ಹೊಂಗಿರಣ | ಮನಸೋತ ಪ್ರೇಕ್ಷಕ
ಮಕ್ಕಳ ಶಿಕ್ಷಣದ ಅವಧಿಯಲ್ಲಿ ಪೋಷಕರು ಕೆಲವು ತ್ಯಾಗ ಅವಶ್ಯಕವಾಗಿದೆ. ನೀವು ಮೊಬೈಲ್, ಟಿವಿ ವೀಕ್ಷಣೆ ಕಡಿಮೆ ಮಾಡಿದರೆ ಮಕ್ಕಳು ಕೂಡ ಅದರತ್ತ ಆಕರ್ಷಿತರಾಗುವುದಿಲ್ಲ ಎಂಬುದನ್ನು ಅರಿತುಕೊಂಡು ಅವರ ಮನೋವಿಕಾಸಕ್ಕೆ ಮುಂದಾಗಿ ಎಂದು ಸಲಹೆ ನೀಡಿದರು.
ನಿಮ್ಮ ಕನಸನ್ನು ನಿಮ್ಮ ಮಕ್ಕಳು ನೆರವೇರಿಸುವಂತೆ ಬೆಳೆಸಿ. ಅವರಿಗೆ ಯಾವುದು ಸರಿ ತಪ್ಪು ತಿಳಿಸಿಕೊಡಿ. ನೀಡುವ ಶಿಕ್ಷೆ ಮತ್ತೆ ತಾನು ತಪ್ಪು ಮಾಡಬಾರದು ಎಂಬ ರೀತಿ ಇರಬೇಕೇ ಹೊರತು ಘಾಸಿಗೊಳ್ಳುವಂತಲ್ಲ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆದ ಶಿಕ್ಷಕ ಎನ್. ಷಣ್ಮುಖಾಚಾರ್ಯ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರಷ್ಟೆ ಅಲ್ಲ ಪೋಷಕರ ಶ್ರಮವೂ ಅವಶ್ಯ. ಮನೆಯಿಂದಲೇ ಅವರಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಬೇಕು. ಮಾನವೀಕ ಮೌಲ್ಯದ ಗುಣಗಳನ್ನು ಪರಿಚಯಿಸಬೇಕು ಎಂದು ತಿಳಿಸಿದರು.
Also Read>> ಶಿವಮೊಗ್ಗ | ಜಿಲ್ಲಾ ಲಿಪಿಕ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಟಿ. ಪ್ರಕಾಶ್ ಅವಿರೋಧ ಆಯ್ಕೆ
ಸಂಸ್ಕಾರಯುತ ಶಿಕ್ಷಣ ಮಕ್ಕಳ ಮನೋದೈಹಿಕ ದೃಢತೆಗೆ ನೆರವಾಗುತ್ತದೆ. ಗುಣಾತ್ಮಕ ವಿವೇಚನೆಗಳು ಅವರಿಗೆ ನಿಮ್ಮಿಂದಲೇ ದೊರಕುವಂತಾಗಬೇಕು ಎಂದರು.
ತಾಲೂಕು ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ರಾಜು ಹಿರಿಯಾವಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ದೇವಿ ಸೌಂಡ್ಸ್ ಅವರ ವರ್ಣಮಯ ವೇದಿಕೆಯಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಹಾಡುಹಸೆ, ಗೀತಗಾಯನ, ನೃತ್ಯ, ಏಕಪಾತ್ರಾಭಿನಯ ಮೊದಲಾದ ಸುಪ್ತ ಚಟುವಟಿಕೆಗಳು ಪ್ರೀ ಪ್ರೈಮರಿ ಮಕ್ಕಳಿಂದ ಅನಾವರಣಗೊಂಡವು.
ಸೊರಬದ ಶುಂಠಿ ವ್ಯಾಪಾರಸ್ಥರಾದ ಆಸೀಫ್, ಸೊರಬ ಪುರಸಭೆ ಸದಸ್ಯರಾದ ಪ್ರೇಮಾ ಟೋಕಪ್ಪ, ಮಾಜಿ ಉಪಾಧ್ಯಕ್ಷ-ಹಾಲಿ ಸದಸ್ಯರಾದ ಮಧುರಾಯ ಜಿ. ಶೇಟ್, PWD ಕ್ಲಸ್ಟರ್ ಸಿಆರ್’ಪಿ ಸುಧಾ, ಉದ್ಯಮಿಗಳಾದ ನಾಗರಾಜ ಗುತ್ತಿ, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಗುಡಿಗಾರ್, ಸಂಸ್ಥೆಯ ಅಧ್ಯಕ್ಷರಾದ ಎಂ. ಪಿ. ರಾಘವೇಂದ್ರ, ಮುಖ್ಯಶಿಕ್ಷಕಿ ಕಲ್ಪನಾ ರಾಘವೇಂದ್ರ, ಶಿಕ್ಷಕಿಯರಾದ ಶ್ವೇತಾ, ಗ್ರೀಷ್ಮ, ಪ್ರಿಯಾಂಕಾ, ಸಿಬ್ಬಂದಿ, ಪೋಷಕ ವರ್ಗದವರು ಇದ್ದರು.
(ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post