ಕಲ್ಪ ಮೀಡಿಯಾ ಹೌಸ್ | ಸೊರಬ |
ಕೃಷಿ ವಲಯದಲ್ಲಿನ ಸಾಧನೆ ಏಕವ್ಯಕ್ತಿಯದ್ದಲ್ಲ, ಈ ಕ್ಷೇತ್ರದಲ್ಲಿ ಅನೇಕ ಕಾಣದ ಕೈಗಳ ನೆರವಿರುತ್ತದೆ. ವೈವಿಧ್ಯತೆಯಲ್ಲಿನ ಏಕತೆಯಲ್ಲಿ ನಾನು ನೆಪ ಮಾತ್ರ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಮಂಚಾಲೆ ಹೇಳಿದರು.
ಪಟ್ಟಣ ಹೊರವಲಯದ ಜಯಂತಿ ಗ್ರಾಮದಲ್ಲಿನ ಪ್ರಗತಿಪರ ಕೃಷಿಕ ಶ್ರೀಧರಮೂರ್ತಿ ನಡಹಳ್ಳಿ ಇವರ ಮನೆಯಂಗಳದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಇಂದು ಕೃಷಿಕ ಸಮಗ್ರ ಕೃಷಿ ಚಿಂತನೆ ನಡೆಸಬೇಕಾದುದು ಅವಶ್ಯವಿದೆ. ಪರಿಸರದೊಂದಿಗಿನ ಹೊಂದಾಣಿಕೆ ಮೂಲಕ ಮಾತ್ರ ಸುಸ್ಥಿರ ಕೃಷಿ ಬದುಕು ನಡೆಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಅಧ್ಯಯನ ಅತ್ಯವಶ್ಯ. ಎಲ್ಲೋ ಮೂಲೆಯ ಹಳ್ಳಿಯಲ್ಲಿದ್ದು ಒಂದಿಷ್ಟು ನೈಸರ್ಗಿಕ ಕೃಷಿಯ ಮೂಲಕ ಔಷಧೀಯ ಮತ್ತು ವಿರಳವಾದ ಹಲವು ಸ್ಪೀಷಿಸ್ ಗಿಡಮರ ಬೆಳೆಸಿರುವ ನನಗೆ ರಾಷ್ಟ್ರ ಪ್ರಶಸ್ತಿ ದೊರಕಿರುವುದು ಸಂತಸದ ಜೊತೆಗೆ ಇಂತಹ ಪರಿಕಲ್ಪನೆಯನ್ನು ಜನತೆಗೆ ತಲುಪಿಸುವ ಜವಾಬ್ಧಾರಿಯನ್ನೂ ಹೆಚ್ಚಿಸಿದೆ ಎಂದರು.
ಎನ್.ಕೆ. ಶ್ರೀಧರಮೂರ್ತಿ ಮತ್ತು ಕುಟುಂಬದವರು, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕಟ್ಟಿನಕೆರೆ ಸೀತಾರಾಮಯ್ಯ, ಹೆಚ್.ಎಸ್.ಮಂಜಪ್ಪ, ಕಲಾವಿದ ಬಂದಗದ್ದೆ ರಾಧಾಕೃಷ್ಣ, ನಡಹಳ್ಳಿ ವಿಪ್ರ ಬಂಧುಗಳನೇಕರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post