ಕಲ್ಪ ಮೀಡಿಯಾ ಹೌಸ್ | ಸೊರಬ |
ಡೆಂಗ್ಯೂ #Dengue ರೋಗವು ಮಾರಕ ಕಾಯಿಲೆಯಾಗಿದ್ದು, ಅದನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಉದ್ರಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಮಹೇಶ ಮೂರ್ತಿ ಹೇಳಿದರು.
ಡೆಂಗ್ಯೂ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ, ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಡೆಂಗ್ಯೂ ರೋಗವು ಮೂರು ಹಂತಗಳಲ್ಲಿ ತೋರುತ್ತದೆ:
- ಮೊದಲ ಹಂತ: ಸಾಮಾನ್ಯ ಜ್ವರದ ಲಕ್ಷಣಗಳು.
- ಎರಡನೇ ಹಂತ: ರಕ್ತಸ್ರಾವ ಸಂಭವ.
- ಮೂರನೇ ಹಂತ: ರಕ್ತದೊತ್ತಡ ಕಡಿಮೆಯಾಗುವುದು ಮತ್ತು ಪ್ರಜ್ಞೆ ಹೀನ ಸ್ಥಿತಿ ತಲುಪುವುದು, ಕೊನೆಗೆ ಸಾವು ಸಂಭವಿಸಬಹುದು.
ಈ ಹಂತಗಳಲ್ಲಿ, ನಿರ್ಲಕ್ಷಿಸಿದರೆ ರೋಗವು ಮಾರಕ ಸ್ಥಿತಿಗೆ ತಲುಪಬಹುದು. ಆದ್ದರಿಂದ, ನೌಕರವರ್ಗದವರು ಮತ್ತು ಸಾರ್ವಜನಿಕರು ಸೊಳ್ಳೆಗಳ ನಿರ್ಮೂಲನೆ ಮಾಡುವ ಮೂಲಕ ಈ ಕಾಯಿಲೆಯನ್ನು ಹತೋಟಿಗೆ ತರುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಸೂಚಿಸಿದರು.
Also read: ಶಿಕಾರಿಪುರ | ಮೈದುಂಬಿಕೊಂಡ ಅಂಜನಾಪುರ ಜಲಾಶಯಕ್ಕೆ ಬಾಗಿನ ಸಮರ್ಪಣೆ
ಗ್ರಾಮ ಪಂಚಾಯಿತಿ ಪಿಡಿಓ ಹೊಮೇಶಪ್ಪನವರು ಮಾತನಾಡಿ, “ಸೊಳ್ಳೆಗಳ ನಿರ್ಮೂಲನೆಗೆ ಎಲ್ಲಾ ರೀತಿಯ ಸಹಕಾರವನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಗುವುದು” ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post