ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಶ್ವದಾದ್ಯಂತ ಇಂದು ಜಲದಿನ ನಡೆಯುತ್ತಿದೆ. ಯಾವುದೋ ಸಿಮೆಂಟ್ ಹಾಸಿನ ನಡುವೆ ಜಲದಿನ ಆಚರಿಸುವುದಕ್ಕಿಂತಲೂ ಗ್ರಾಮಾಂತರ ಪ್ರದೇಶದ ಜಲಮೂಲದ ಸನಿಹ ಆಚರಿಸುವ ಜಲದಿನ ಹೆಚ್ಚು ಅರ್ಥಪೂರ್ಣ ಎಂದು ಹಿರಿಯ ವಕೀಲ ಎಂ.ಆರ್. ಪಾಟೀಲ್ ಹೇಳಿದರು.
ತಾಲ್ಲೂಕು ಶಾಂತಗೆರೆ ಗ್ರಾಮದ ತಾವರೆಕೆರೆ ಅಂಗಳದಲ್ಲಿ ಗ್ರಾಮಸ್ಥರ ಜೊತೆ ಪರಿಸರ ಜಾಗೃತಿ ಟ್ರಸ್ಟ್ ಹಾಗೂ ಪರ್ಯಾವರಣ ಗತಿವಿಧಿ ಸಂಘಟನೆಗಳು ಹಮ್ಮಿಕೊಂಡಿದ್ದ ಕೆರೆಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮಸ್ಥರು ಕೆರೆಯನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಂಡು ಕಾಪಾಡಿಕೊಂಡು ಬಂದಿದ್ದಾರೆ. ಕೆರೆಯ ರಕ್ಷಣೆಗೆ ಕಾಳಜಿ ಇದೆ. ಕೆರೆಯ ಮೌಲ್ಯ, ಉಪಯೋಗಗಳ ಬಗ್ಗೆ ಅರಿವು ಮೂಡಿಸಿ ಕಾಯ್ದುಕೊಳ್ಳುವ ಮೂಲಕ ಮುಂಪೀಳಿಗೆಗೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಪರ್ಯಾವರಣದ ಹಾಗೂ ಪಜಾಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಕೆರೆಯ ಇತಿಹಾಸದ ಬಗ್ಗೆ ವಿವರ ನೀಡಿ, ಆಚರಣೆಗಳು ಕೇವಲ ಆಚರಣೆಗಷ್ಟೆ ಸೀಮಿತವಾಗದೆ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಜಲಸಂರಕ್ಷಣೆ, ಜಲ ರಕ್ಷಣೆಗೆ ಪೂರಕವಾದ ಅರಣ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.
ಹೈಕೋರ್ಟ್ ವಕೀಲ ಮಂಜುನಾಥ ಹೆಗಡೆ ಕೆರೆಕೊಪ್ಪ, ಮುಂಪೀಳಿಗೆಗೆ ಮಾತ್ರವಲ್ಲ ಬದುಕಿರುವ ನಮಗೂ ನೀರಿನ ಅಗತ್ಯವಿದೆ. ನಾವಿರುವ ತನಕವೂ ಜಲಮೂಲಗಳನ್ನು ಉಳಿಸಿಕೊಂಡರೆ ಮುಂದಿನ ತಲೆಮಾರಿನವರು ಸ್ವಸ್ಥ ಜೀವನ ನಡೆಸುವ ಜೊತೆಗೆ ಅವರೂ ಉಳಿಸಿಕೊಂಡು ಹೊಗುತ್ತಾರೆ. ಜಲದಿನ ನಿತ್ಯವೂ ಆಗಿರಲಿ ಎಂದರು.
Also read: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ | ಆರೋಪಿಗಳು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು!?
ವಕೀಲ ನಾಗಪ್ಪ ಮಾತನಾಡಿ, ಜೀವಜಲದ ರಕ್ಷಣೆಗೆ ಮುಂದಾಗದಿದ್ದರೆ ಶೀಘ್ರದಲ್ಲೇ ಜಲಕ್ಷಾಮ ಎದುರಿಸ ಬೇಕಾದಂತಹ ಸ್ಥಿತಿ ಬಂದೆರಗುತ್ತದೆ. ಇರುವ ಅರಣ್ಯ ರಕ್ಷಣೆಯ ಜೊತೆಗೆ ಅವಕಾಶವಿದ್ದಲ್ಲಿ ಗಿಡ ನೆಡಿ ಎಂದರು.
ಗ್ರಾಮದ ಗ್ರಾಪಂ ಉಪಾಧ್ಯಕ್ಷ ಹೆಮಚಂದ್ರ ಮಾತನಾಡಿ, ಗ್ರಾಮದ ಜಲಮೂಲ, ಇರುವ ಗಿಡಮರ, ಅರಣ್ಯಗಳ ರಕ್ಷಣೆ ಎಲ್ಲರ ಹೊಣೆ. ಈ ಜವಾಬ್ಧಾರಿ ಅರಿತು ಗ್ರಾಮದಲ್ಲಿ ಕುಡಿತುವ ನೀರಿನ ಸಮಸ್ಯೆಯಾಗದಂತೆ ಕೃಷಿ ಬದುಕನ್ನು ಹಸನಗೊಳಿಸಿಕೊಳ್ಳಬೇಕು ಎಂದರು.
ಕೆರೆಪೂಜೆಯನ್ನು ಪೂಜಾರಿ ಇಂದೂಧರಸ್ವಾಮಿ ನೆರವೇರಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮಪ್ಪ, ಗ್ರಾಮ ಪ್ರಮುಖ ನೇಮರಾಜ, ಉಮೇಶ್, ಕೃಷ್ಣಮೂರ್ತಿ, ಶೇಷಪ್ಪ, ಎ.ಡಿ.ಬಸವರಾಜ್, ಎಸ್.ಟಿ.ಮಹದೇವಪ್ಪ, ಕುಬೇರಪ್ಪ, ಭಾಗ್ಯಮ್ಮ ಸೊರಬ ಇನ್ನೂ ಅನೇಕ ಗ್ರಾಮಸ್ಥರು ಪಾಲ್ಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post