ಸೊರಬ: ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಪ್ರಯುಕ್ತ ಸ್ನೇಹ ಕಟಿಂಗ್ ಶಾಪ್ ಮಾಲೀಕ ಏಕಾಂತ ಹಾಗೂ ಅವರ ಸಹೋದರರು ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುವುದರ ಮೂಲಕ ಸವಿತಾ ಮಹರ್ಷಿ ಜಯಂತಿಯನ್ನು ವಿನೂತನವಾಗಿ ಆಚರಿಸಿದರು.
ಸ್ನೇಹ ಕಟಿಂಗ್ ಶಾಪ್ ಮಾಲೀಕ ಏಕಾಂತ ಮಾತನಾಡಿ, ನಾವು ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಎಲ್ಲರೂ ಒಂದಾಲ್ಲ ಒಂದು ರೀತಿಯ ದುಡಿಮೆ ಮಾಡಿ ಆದಾಯ ಗೊಳಿಸುವುದು ಸಹಜ. ಬಂದ ಆದಾಯದಲ್ಲಿ ಸ್ವಲ್ಪ ಭಾಗವನ್ನುಇಂಥ ಸಮಾಜ ಸೇವೆಗೆ ಬಳಸಿಕೊಂಡಾಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದ ಅವರು ತಾಲೂಕಿನಲ್ಲಿ ನಮ್ಮ ತಂದೆಯವರ ಕಾಲದಿಂದಲೂ ಇದೇ ವೃತ್ತಿಯನ್ನು ಮಾಡುತ್ತ ಬರುತ್ತಿದ್ದು, ಈಗಲೂ ನಾನು ಹಾಗೂ ನನ್ನ ಸಹೋದರರು ಇದೇ ವೃತ್ತಿಯನ್ನ ನಂಬಿಕೊಂಡಿದ್ದೇವೆ. ಇನ್ನು ಮುಂದೆ ತಾವು ಬದುಕಿರುವವರೆಗೂ ವಿಕಲಚೇತನ ಶಾಲೆಯಲ್ಲಿರುವ ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುವುದಾಗಿ ಇದೇ ವೇಳೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಸ್. ರವೀಂದ್ರ, ಸಹ ಶಿಕ್ಷಕರಾದ ಕೆ.ಬಿ. ಪುಟ್ಟರಾಜು, ಗಾಯತ್ರಿ ನಾಯ್ಕ್, ಮಂಗಳ ಎಸ್ ಪೂಜಾರ್, ವಾಣಿಶ್ರೀ, ಹಾಗೂ ಏಕಾಂತ್ ತಾಯಿ ಲೇಖಕಮ್ಮ ಇದ್ದರು.
(ವರದಿ: ಮಧುರಾಮ್, ಸೊರಬ)
Discussion about this post