ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ನಿಧನರಾಗಿ ನಾಲ್ಕು ದಿನ ಕಳೆದರು ಕೂಡ ತಾಲ್ಲೂಕಿನಾದ್ಯಂತ ಸೂತಕದ ಛಾಯೆ ಇನ್ನೂ ಮಾಸಿಲ್ಲ. ಪ್ರತಿ ಹಳ್ಳಿಹಳ್ಳಿ, ಮನೆಮನೆಗಳಲ್ಲಿ ಶೋಕತಪ್ತ ವಾತಾವರಣವಿದ್ದು, ಅವರ ಭಾವಚಿತ್ರಕ್ಕೆ ನಿತ್ಯವೂ ಹೂವಿಟ್ಟು ದೀಪ ಹಚ್ಚಿ ಅವರ ಸದ್ಗತಿಗೆ ಪ್ರಾರ್ಥಿಸುವ ಕಳಕಳಿ ಗಮನಾರ್ಹವಾಗಿದೆ. ಅನೇಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು, ಸಂತಾಪ, ಶ್ರದ್ಧಾಂಜಲಿ ಸಭೆಗಳು ನಡೆಯುತ್ತಿವೆ.
ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳವರು, ಕೂಲಿ ಕಾರ್ಮಿಕರು, ಚಾಲಕ ವೃತ್ತಿ, ಗಾರೆ ವೃತ್ತಿ ಮುಂತಾದ ವೃತ್ತಿ ನಿರತರು ಶೋಕ ಸಭೆ ನಡೆಸುತ್ತಿದ್ದಾರೆ. ಪಟ್ಟಣದ ದಾನಮ್ಮ ಕಾಂಪ್ಲೇಕ್ಸ್‌ನಲ್ಲಿ ರೋಟರಿ ಸಂಸ್ಥೆಯವರು ವಿವಿಧ ಸಂಘಸಂಸ್ಥೆಯವರನ್ನು ಕೂಡಿಕೊಂಡು ಶ್ರದ್ಧಾಂಜಲಿ ಸಭೆ ನಡೆಸಿದರು.
ಪುನೀತ್ ಅವರ ನಟನೆಯ ಜೊತೆಗೆ ಅವರ ಸಮಾಜಮುಖಿ ಚಿಂತನೆ, ಆದರ್ಶಗಳ ಕುರಿತು ಮೆಲುಕು ಹಾಕುವ ಜೊತೆಗೆ ಅವರ ಆತ್ಮಕ್ಕೆ ಸದ್ಗತಿ ದೊರಕುವಂತೆ, ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ದೊರೆಯಲೆಂದು ಪ್ರಾರ್ಥಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ರೋಟರಿಯ ಪ್ರಮುಖರೊಂದಿಗೆ ತಾಲ್ಲೂಕು ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷ ಪದಾಧಿಕಾರಿ ಸದಸ್ಯರುಗಳು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಪುರ ಪ್ರಮುಖರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post