ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ತಾಲೂಕಿನ ಬಾಡದಬೈಲು (ಕವಡೆಗದ್ದೆ) ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಮಾತಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಮಾ. 16ರಿಂದ 18ರವರೆಗೆ ಶ್ರೀದೇವರ 37ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಆಯೋಜಿಸಲಾಗಿದೆ.
ಮಾ.16ರ ಗುರುವಾರ ಸಂಜೆ ವಾಸ್ತು ರಾಕ್ಷೆಘ್ನ ಹವನ, ದಿಕ್ಷಾಲಬಲಿ ಪೂಜೆ ಮಂಗಳಾರತಿ ನಡೆಯಲಿದೆ.
17ರ ಶುಕ್ರವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಫಲಸಮರ್ಪಣೆ, ಸಪ್ತಶತೀ ಪಾರಾಯಣ ಶ್ರೀ ದೇವರಿಗೆ ‘ಕಲಾವೃದ್ಧಿ ಹವನ’, ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ ಹಾಗೂ ಸಂಜೆ ಉತ್ಸವಾದಿಗಳು ಜರುಗಲಿದೆ.

Also read: ಕಾರಿನಲ್ಲಿದ್ದ ದಂಪತಿಗೆ ಚಾಕು ತೋರಿಸಿ ದರೋಡೆ: ಚಿನ್ನಾಭರಣ ದೋಚಿ ಪರಾರಿ
ವಿಶೇಷ ಸೂಚನೆ:
ಸರ್ವಸೇವೆ, ನವಗ್ರಹಶಾಂತಿ, ಸತ್ಯನಾರಾಯಣ ವ್ರತ, ಶನೇಶ್ವರ ವ್ರತ ಮಾಡಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಿ, ಹಣ ಪಾವತಿ ಮಾಡುವುದು. ಹಾಗೂ 18ರ ಶನಿವಾರ ಬೆಳಿಗ್ಗೆ ಶ್ರೀದೇವರ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ರಾತ್ರಿ 8:30ಕ್ಕೆ ಶ್ರೀ ಭೂತಲಿಂಗೇಶ್ವರ ಯಕ್ಷಗಾನ ಮಂಡಳಿ ಬಂಡಿಗೆ ಇವರಿಂದ ಶ್ರೀ ಶನೇಶ್ವರ ಮಹಾತ್ಮೆ (ರಾಜಾವಿಕ್ರಮ ಚರಿತ್ರೆ) ಬಯಲಾಟ ನಡೆಯಲಿದೆ.
ವರದಿ: ಮಧುರಾಮ್, ಸೊರಬ










Discussion about this post