ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಕಜಾಪ ಗೌರವಾಧ್ಯಕ್ಷ ಹಾಗೂ ಜನಪದ ಕಲೋಪಾಸಕ ಬಿಚ್ಚುಗತ್ತಿಯವರು ಪ್ರಸಕ್ತ ಸಾಲಿನ ತಾಲ್ಲೂಕು 10ನೇ ಕಸಾಪ ಸಮ್ಮೇಳನದ #Kasapa Sammelana ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ತಾಲ್ಲೂಕು ಕಜಾಪ ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ ಹೇಳಿದರು.
ಇದೇ ಏಪ್ರಿಲ್ ತಿಂಗಳು ನಡೆವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಪಾದ ಬಿಚ್ಚುಗತ್ತಿ ಅವರಿಗೆ ಅವರ ಸ್ವಗೃಹದಲ್ಲಿ ಕಜಾಪ ವತಿಯಿಂದ ಅಭಿನಂದಿಸಿ ಮಾತನಾಡಿದರು.
ಇತಿಹಾಸ, ಪತ್ರಿಕೆ, ಪರಿಸರ, ಭಾಷೆ, ಜನಪದ, ಸಮಗ್ರ ತಾಲ್ಲೂಕು ಐತಿಹಾಸಿಕ ಅವಲೋಕನ, ಶೋಧನೆಯ ಕಾರ್ಯದಲ್ಲಿ ಅವರದು ಅನನ್ಯ ಸೇವೆ. ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ಹಲವು ಗರಿಮೆ, ಹಿರಿಮೆಯ ಕಿರೀಟವಿದ್ದರೂ ಸಾಮಾನ್ಯರಾದ ಅಸಮಾನ್ಯ ಇವರ ಸೇವೆ ನಿರಂತರವಾಗಿರಲಿ ಎಂದು ಆಶಿಸಿದರು.
ಅಭಿನಂದನೆ ಸ್ವೀಕರಿಸಿದ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಜಾನಪದ ಪರಿಷತ್ ವತಿಯಿಂದ ಮೊದಲಿಗೇ ಗೌರವಿಸಿದ್ದು ಸಂತಸ ತಂದಿದೆ, ಸಾಹಿತ್ಯದ ಜೊತೆ ಜೊತೆಗೆ ಜಾನಪದ ಕಲೆ ಉಳಿಸಿ ಬೆಳಸುವ ಜವಾಬ್ದಾರಿಯೂ ಇದೆ ಎಂದ ಅವರು ದೇಸಿ ಬಾಸೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪರಿಷತ್ ಗೌರವ ಸಲಹೆಗಾರ ಹೆಚ್. ಧರ್ಮಪ್ಪ, ಕಾರ್ಯಧ್ಯಕ್ಷ ಮಂಜಪ್ಪ ಎಂ. ಕೆ., ಸಂಚಾಲಕ ಹರೀಶ್ ಗುಂಡಶೆಟ್ಟಿಕೊಪ್ಪ, ಸದಸ್ಯರಾದ ರಾಘವೇಂದ್ರ ಅಂದವಳ್ಳಿ, ಸಚಿನ್ ಪಾಟೀಲ್, ಸುಬ್ರಾಯ ಹಳ್ಳೆರ್, ಗಣಪತಿ ಸಂಗೇರಾ, ಸತೀಶ್ ಟಿ.ಜಿ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















