ಕಲ್ಪ ಮೀಡಿಯಾ ಹೌಸ್ | ಸೊರಬ |
ಗ್ರಾಮೀಣ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿತು.
ಅಖಾಡದಲ್ಲಿ ಚಿಕ್ಕನಂದಿಹಳ್ಳಿ ಚಾಮುಂಡಿ ಎಕ್ಸ್‌ಪ್ರೆಸ್, ಹಾರನಹಳ್ಳಿ ಸೃಷ್ಟಿಕರ್ತ ಛಾಯಾ ನಗರ, ಕಾತುವಳ್ಳಿ ಅಂಬಿಗರ ಹುಲಿ, ಹನುಮನಕೊಪ್ಪ ಡಾನ್, ಬೆಟ್ಟದಕೂರ್ಲಿ ಲಂಕಾಸುರ, ಅರಿಶಿಣಗೇರಿ ಗೂಳಿ, ಹೆಸರಿಯ ಚಿನ್ನಾಟದ ಚಿನ್ನ, ವೈಭವ ಶಿವಮೊಗ್ಗದ ಮಹಾರಾಜ, ವಿಷ್ಣುದಾದಾ, ಕೊಡಕಣಿ ಡಾನ್, ತ್ಯಾಗರ್ತಿ ದರ್ಭಾರ್, ಸೊರಬದ ಸೂಪರ್ ಸ್ಟಾರ್, ಹಂಟರ್, ನಗುಮುಖದ ಕಳಸ, ವರದಾ ಚಿನ್ನಾ, ಸೇರಿದಂತೆ ಜಮೀನ್ದಾರನ ಏಕಲವ್ಯ, ಯಜಮಾನ ಪಾಳೆಗಾರ, ಕಲ್ಲೇಶ, ಜೆ.ಪಿ. ಗೌಡ್ರು ದರ್ಭಾರ್, ಅನಾಹುತ, ಹೋರಿ ಮಂಚಪ್ಪ, ಕ್ರಾಂತಿ ವೀರ, ಯಲವಳ್ಳಿ ಕಿಂಗ್, ಡಿ.ಜೆ. ದರ್ಭಾರ್, ನಾಗಪ್ಪ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಅಖಾಡದಲ್ಲಿ ಓಡಿದವು.
Also read: Order for investigation without sanction from the Speaker is unlawful: CM Siddaramaiah
ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.
ಹೋರಿ ಹಬ್ಬದ ಆಯೋಜಿಸಿದ್ದ ಯಲವಳ್ಳಿ ಗ್ರಾಮಸ್ಥರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.
ಹಾರನಹಳ್ಳಿ ಹೋರಿ ಮಾಲಿಕರಾದ ಹನುಮಂತಪ್ಪ ಮಾತನಾಡಿ, 25 ವರ್ಷದಿಂದ ಹಬ್ಬ ಆಚರಿಸುತ್ತಿದ್ದೇವೆ. ಹೋರಿಯನ್ನು ಪ್ರೀತಿಯಿಂದ ಸಾಕುತ್ತೇವೆ. ಹಬ್ಬದಲ್ಲಿ ಹೋರಿಯೊಂದಿಗೆ ನಾವೂ ಸಹ ಸಂಭ್ರಮಿಸುತ್ತೇವೆ ಎಂದು ತಿಳಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post