ಕಲ್ಪ ಮೀಡಿಯಾ ಹೌಸ್ | ಸೊರಬ |
ಎರಡು ದಶಕಗಳಿಗಿಂತಲೂ ಹಿಂದೆ ಅಪಾರ ಜನಾಕರ್ಷಣೆ ಪಡೆದು ಸಾಗರ ಭಾರತಿ ಕಲಾವಿದರನ್ನು ಮುನ್ನೆಲೆಗೆ ತಂದು 150ಕ್ಕೂ ಹೆಚ್ಚು ಪ್ರದರ್ಶನ ನಡೆಸಿದ ಸಂಗ್ಯಾಬಾಳ್ಯ ಜನಪದ ನಾಟಕ ಪುನಃ ಸೊರಬದ ಕಲಾವಿದ ಗೆಳೆಯರಿಂದ ಅನಾವರಣಗೊಂಡಿದ್ದು, ಮೊದಲ ಪ್ರದರ್ಶನ ತಾಲ್ಲೂಕಿನ ಹುನವಳ್ಳಿಯಲ್ಲಿ ನಡೆದಿದ್ದು, ಸ್ವಾಗತಾರ್ಹವೆನಿಸಿತು.
Also read: ತಡೆರಹಿತ ವಿದ್ಯುತ್ ಪೂರೈಕೆಗಾಗಿ KPTCL ನಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಕೆ
ಬಯಲುಸೀಮೆಯ ಕಥಾನಕ ಮಲೆನಾಡಿನ ಜನತೆಯ ಗಮನ ಸೆಳೆದಿದ್ದು ಸೊರಬದ ಕಲಾವಿದರು ಹಿನ್ನೆಲೆ ಗಾಯನಕ್ಕೆ ಅಭಿನಯಿಸಿದ ಪರಿ ಆಶಾದಾಯಕ, ಇನ್ನಷ್ಟು ಪ್ರದರ್ಶನದ ಮೂಲಕ ಪ್ರಹಸನ ಇನ್ನಷ್ಟು ಗಟ್ಡಿಗೊಳ್ಳಲಿ ಎಂದು ಸಮಾಜ ಚಿಂತಕ ನಾಟಕ ನಿರ್ದೇಶಕ ದೇವೇಂದ್ರ ಬೆಳೆಯೂರು ಪ್ರದರ್ಶನದ ಕುರಿತು ಮಾತನಾಡಿದರು.

ಸಂಗ್ಯಾನ ಪಾತ್ರದಲ್ಲಿ ಸಾಹಿತಿ ಬಿದರಗೆರೆ ರೇವಣಪ್ಪ, ಬಾಳ್ಯನ ಪಾತ್ರದಲ್ಲಿ ಹರ್ಷಹೆಗಡೆ, ಈರ್ಯ ಮತ್ತು ಮಾರ್ವಾಡಿ ಪಾತ್ರದಲ್ಲಿ ಸುಬ್ರಹ್ಮಣ್ಯ ಗುಡಿಗಾರ್, ಇರುಪಾಕ್ಷಿಯಾಗಿ ವಿ.ಲಕ್ಷ್ಮಣ, ಬಸವಂತನಾಗಿ ವಕೀಲ ಡಾಕಪ್ಪ, ಸಂದೇಶ ಮಳಲಗದ್ದೆ, ಪೂಜಾರಿಯಾಗಿ ವಕೀಲ ಗೋಪಾಲ್, ಪಾರಮ್ಮಳಾಗಿ ಸುಶೀಲಮ್ಮ, ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ ಹುಣವಳ್ಳಿ, ಸಾವಿತ್ರಿ, ಕೃತ್ತಿಕಾ, ಶಶಿಕಲಾ, ಕೋಮಲ, ಕ್ಯಾಷಿಯೋ ವಾದಕರಾಗಿ ಈರಪ್ಪ ಶಿಕ್ಷಕರು, ತಬಲಾ ವಾದಕರಾಗಿ ಷಣ್ಮುಖ ನಿರ್ವಹಿಸಿದರು.

(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post