ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಮಾನ್ಯವಾಗಿ ಬಹಳಷ್ಟು ಶಿಕ್ಷಣ ಸಂಸ್ಥೆಗಳು ಉತ್ತಮ ಫಲತಾಂಶಕ್ಕಾಗಿ ದಾಖಲಾತಿಯ ವೇಳೆ ಅಂಕಗಳ ಮಿತಿಯನ್ನು ಪರಿಗಣಿಸುತ್ತವೆ. ಆದರೆ, ತಾಲೂಕಿನ ಪ್ರತಿಷ್ಠಿತ ಅಮರ ಜ್ಯೋತಿ ಶಿಕ್ಷಣ ಸಂಸ್ಥೆ ಮಾತ್ರ ಇದಕ್ಕೆ ವಿಭಿನ್ನವಾಗಿ ಯಾವುದೇ ದಾಖಲಾತಿ ಅಂಕಗಳ ಮಿತಿಯಿಲ್ಲದೇ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು, ಶೇ.100ರಷ್ಟು ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದೆ.
ಹೌದು…ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ #SecondPUResult ಇತ್ತೀಚೆಗೆ ಪ್ರಕಟಗೊಂಡಿದ್ದು ಸೊರಬದ #Soraba ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜು ಶೇ.100ರಷ್ಟು ಫಲಿತಾಂಶದೊಂದಿಗೆ ಅಭೂತಪೂರ್ವ ಸಾಧನೆಯನ್ನು ಮಾಡುವ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಮತ್ತೊಂದು ಗರಿ ಮೂಡಿಸಿದೆ.ದಾಖಲಾತಿಗೆ ಅಂಕಗಳ ಮಿತಿಯಿಲ್ಲದೆ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಿಯೂ ವಿಜ್ಞಾನ #Science ಹಾಗೂ ವಾಣಿಜ್ಯ ಕಲಾ ವಿಭಾಗಗಳಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ.
Also read: ಮುಖ್ಯಮಂತ್ರಿ, ಗೃಹಸಚಿವರ ಮಕ್ಕಳಿಗೆ ನೇಹಾ ಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದಿರಿ? ಈಶ್ವರಪ್ಪ ಪ್ರಶ್ನೆ
ವಿಜ್ಞಾನ ವಿಭಾಗದಲ್ಲಿ 32, ವಾಣಿಜ್ಯ #Commerce ವಿಭಾಗದಲ್ಲಿ 22 ಹಾಗೂ ಕಲಾ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಕಾಲೇಜಿಗೆ ಶೇ.100 ಫಲಿತಾಂಶ ಗಳಿಸಿ ಕೊಟ್ಟಿದ್ದಾರೆ. ಮೂರು ವಿಭಾಗಳಿಂದ 18 ಡಿಸ್ಟಿಂಕ್ಷನ್, 47 ಪ್ರಥಮ ದರ್ಜೆ, 9 ದ್ವಿತೀಯ ದರ್ಜೆ, ವಿಜ್ಞಾನ ವಿಭಾಗದಲ್ಲಿ 10 ಡಿಸ್ಟಿಂಕ್ಷನ್, ವಾಣಿಜ್ಯ ವಿಭಾಗದಲ್ಲಿ 5 ಡಿಸ್ಟಿಂಕ್ಷನ್, ಕಲಾ ವಿಭಾಗದಲ್ಲಿ 3 ಡಿಸ್ಟಿಂಕ್ಷನ್ ಗಳಿಸಿ ಕೀರ್ತಿ ತಂದಿದ್ದಾರೆ.
ಶೇ.100ರಷ್ಟು ಫಲಿತಾಂಶ ದಾಖಲಾಗಲು ಕಾರಣರಾದ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಸಿಲ್ವಿಯಾ ಸೆಕ್ವೆರಾ ಉಪನ್ಯಾಸಕ ವರ್ಗ ಸಹಕರಿಸಿದ ಪೋಷಕ ವರ್ಗ, ಗೌರವ ಉಪನ್ಯಾಸಕ ವರ್ಗದವರನ್ನು ಹಳೇ ವಿದ್ಯಾರ್ಥಿಗಳ ಸಂಘ ಅಭಿನಂದಿಸಿ ಮುಂದಿನ ದಿನದಲ್ಲಿ ಹೀಗೆ ಫಲಿತಾಂಶಕ್ಕೆ ಒತ್ತು ನೀಡಬೇಕು ಎಂದು ಹಾರೈಸಿ, ವಿನಂತಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post