ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಬಾಡದಬೈಲು (ಕವಡೆಗದ್ದೆ) ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಮಾತಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಫೆ.27 ರಿಂದ ಮಾ.1ರವರೆಗೆ ಶ್ರೀದೇವರ 39ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಆಯೋಜಿಸಲಾಗಿದೆ.
ಫೆ.27ರ ಗುರುವಾರ ಸಂಜೆ ವಾಸ್ತು ರಾಕ್ಷೋಘ್ನ ಹವನ, ದಿಕ್ಷಾಲಬಲಿ ಪೂಜೆ, ಕ್ಷೇತ್ರ ಪಾಲ ಬಲಿ ಮಂಗಳಾರತಿ ನಡೆಯಲಿದೆ.
ಫೆ.28ರ ಶುಕ್ರವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಫಲಸಮರ್ಪಣೆ, ಸಪ್ತಶತೀ ಪಾರಾಯಣ ಶ್ರೀ ದೇವರಿಗೆ ‘ಕಲಾವೃದ್ಧಿ ಹವನ’, ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಸಂಜೆ ಪಲ್ಲಕ್ಕಿ ಉತ್ಸವ ಜರುಗಲಿದೆ.
Also read: ಚಿತ್ರದುರ್ಗ | ಡೆಡ್ಲಿ ಆಕ್ಸಿಡೆಂಟ್ | ಕಾರು ಡಿಕ್ಕಿ ಹೊಡೆದ ರಭಸಕ್ಕೆ 10 ಅಡಿ ಹಾರಿ ಬಿದ್ದ ಮಹಿಳೆ
ಮಾ.1ರ ಶನಿವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಶ್ರೀಶನೇಶ್ವರ ಸ್ವಾಮಿಗೆ ಪಂಚಾಮೃತ ಪೂರ್ವಕ ತೈಲಾಭಿಷೇಕ, ನವಗ್ರಹ ಶಾಂತಿ ಪೂರ್ವಕ ಶನಿಮಂತ್ರ ಹವನ, ಸಾಮೂಹಿಕ ಸತ್ಯನಾರಾಯಣ ವ್ರತ, ಶನೇಶ್ವರ ವ್ರತ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ವ್ಯವಸ್ಥಾಪಕರು ತಿಳಿಸಿದ್ದಾರೆ.
ವಿಶೇಷ ಸೂಚನೆ:
ಸರ್ವಸೇವೆ, ನವಗ್ರಹಶಾಂತಿ, ಸತ್ಯನಾರಾಯಣ ವ್ರತ, ಶನೇಶ್ವರ ವ್ರತ ಮಾಡಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಿ, ಹಣ ಪಾವತಿ ಮಾಡುವುದು. ಹಾಗೂ ಮಾ.1ರ ಶನಿವಾರ ಬೆಳಿಗ್ಗೆ ಶ್ರೀದೇವರ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ರಾತ್ರಿ 9:30ಕ್ಕೆ ಶ್ರೀ ಭೂತಲಿಂಗೇಶ್ವರ ಯಕ್ಷಗಾನ ಮಂಡಳಿ ಬಂದಿಗೆ ಇವರಿಂದ ಶ್ರೀ ಶನೇಶ್ವರ ಮಹಾತ್ಮ (ರಾಜಾವಿಕ್ರಮ ಚರಿತ್ರೆ) ಬಯಲಾಟ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post