ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಶಿಷ್ಟ ಜನಪದ ನೃತ್ಯವೆನಿಸಿದ ದಾಂಡಿಯಾ, #Dandiya ರಾಸ್ ಅಥವಾ ದಾಂಡಿಯಾ ರಾಸ್ ಪಟ್ಟಣದ ನವರಾತ್ರಿ ಸಂಭ್ರಮದಲ್ಲಿ ಗಮನಸೆಳೆಯಿತು.
ಪಟ್ಟಣ ಪಂಚಾಯತಿ, ದಸರಾ ಉತ್ಸವ ಸಮಿತಿ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ವಿವಿಧ ಕಲಾತ್ಮಕ ನೃತ್ಯ, ಹಾಡು, ಹಸೆ, ನಾಟಕ, ಸಂಗೀತ ಮುಂತಾದವು ಆಕರ್ಷಣೀಯವಾಗಿದ್ದು ಇಲ್ಲಿನ ಮಹಿಳಾ ತಂಡ ದಾಂಡಿಯಾ ನೃತ್ಯದ ಮೂಲಕ ರಂಜಿಸಿದರು.
ಆಯೋಜಕರಾದ ಮಮತಾ ರಾಜೇಶ್, ಗುಜರಾತಿನ ಪಾರಂಪರಿಕ, ಸಾಂಪ್ರದಾಯಿಕ ನೃತ್ಯಕಲೆ ಈಚೆಗೆ ಕರ್ನಾಟಕದಲ್ಲಿ ಜನಪ್ರಿಯ ಎನಿಸಿದ್ದು ವೈಶಿಷ್ಟಪೂರ್ಣ ನೃತ್ಯಕ್ಕೆ ಜನಮನ್ನಣೆ ದೊರೆತಿದೆ. ನೃತ್ಯ ಶೈಲಿಯನ್ನು ಇತರರಿಗಿಂತ ಭಿನ್ನವಾಗಿಸುವುದು, ಅದರ ವೇಷಭೂಷಣ, ಸುಧಾರಣೆಗೆ ಅವಕಾಶ, ನಾವೀನ್ಯತೆ, ಸೃಜನಶೀಲತೆ ಮತ್ತು ನೃತ್ಯಗಾರರ ಸಮೂಹವೆ ಇಲ್ಲಿ ಪ್ರಮುಖ. ಇಂತಹ ಸಮೂಹ ನೃತ್ಯದ ಮೂಲಕ ಮನಸ್ಸು ದೇಹಕ್ಕೆ ಉಲ್ಲಾಸ ತರುವ ಉದ್ದೇಶದಿಂದ ಅಯೋಜಿಸಿದ್ದು ಪಟ್ಟಣ ಮಹಿಳೆಯರು ಸಂಪೂರ್ಣ ಸಹಕರಿಸಿದ್ದಾರೆ ಎಂದರು.
ನೃತ್ಯದಲ್ಲಿ ಪಾಲ್ಗೊಂಡ ಶಾಸ್ತ್ರೀಯ ಗಾಯನದ ಖ್ಯಾತ ಲಕ್ಷ್ಮೀ ಮುರಳೀಧರ, ಅವಿಸ್ಮರಣೀಯ ಕ್ಷಣಗಳಿದು, ಸಂಕೋಚ ಸಡಿಲಗೊಳಿಸುವ, ಪರಸ್ಪರ ಸಾಮರಸ್ಯಕ್ಕೆ ನೆರವಾಗುವ ಇಂತಹ ಕಾರ್ಯಕ್ರಮ ಮತ್ತೆ ಮತ್ತೆ ನಡೆಯುವಂತಾಗಬೇಕು ಎಂದರು.
ಪಟ್ಟಣದ ಸ್ಮಾರ್ಟ್ಕಿಡ್ಜ್ ಮಮತಾ ರಾಜೇಶ್, ಕವಯತ್ರಿ ಶೈಲಜಾ ಹೆಬ್ಬಾರ್, ರೇಖಾ, ಕವಿತಾ, ಅರ್ಚನ ನೇತೃತ್ವದಲ್ಲಿ ನೃತ್ಯವನ್ನು ಆಯೋಜಿಸಲಾಗಿತ್ತು. ಪಟ್ಟಣದ ಅನೇಕ ಮಹಿಳೆಯರು, ಬಾಲಕೀಯರು ನೃತ್ಯದಲ್ಲಿ ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
























