ಕಲ್ಪ ಮೀಡಿಯಾ ಹೌಸ್
ಸೊರಬ: ಸಾಮುದಾಯಿಕ ಪ್ರಜ್ಞೆ ಮೂಡದೆ ಸಾಮರಸ್ಯದ ಕೊರತೆಯ ಜೊತೆಗೆ, ಸಾಮಾಜಿಕ ಜೀವನ ನಿರ್ವಹಣೆಯು ದುಸ್ತರ ಎಂಬುದನ್ನು ನಾವು ಮರೆಯಬಾರದು ಎಂದು ಬಸವೇಶ್ವರ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಜಗದೀಶ್ ಹಿರಳೆ ಹೇಳಿದರು.
ತಾಲ್ಲೂಕು ಹಿರಳೆ ಗ್ರಾಮದ ಸನಂ 22ರ ಹೊಟ್ಟುಗೆರೆ ಪುನರುಜ್ಜೀವನ ಕಾಯಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೆಲಜಲ ಸಂಸ್ಕೃತಿಯ ಕಾಳಜಿಯಿರಿಸಿ ಸಕ್ರಿಯ ಕಾರ್ಯನಿರ್ವಹಿಸುತ್ತಿರುವ ಸಾರಾಸಂಸ್ಥೆಯ ಸಹಕಾರದಿಂದ ಕೆರೆ ಬಳಕೆದಾರರ ಧನಸಹಾಯ ಪಡೆದು 2.32 ಎಕರೆ ವಿಸ್ತೀರ್ಣದ ಅರವತ್ತೆಪ್ಪತ್ತು ವರ್ಷದಿಂದ ನೀರು ಸಂಗ್ರಹದ ಸಾಮರ್ಥ್ಯ ಕಳೆದುಕೊಂಡಿರುವ ಈ ಕೆರೆಯನ್ನು ಜೀರ್ಣೋದ್ಧಾರಗೊಳಿಸಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರ, ಪರಿಸರಾಸಕ್ತರ ಮಾರ್ಗದರ್ಶನ ಪಡೆದು ಇಂತಹ ಉತ್ತಮ ಕಾರ್ಯಕ್ಕೆ ಮುಂದಾಗಿದ್ದು, ಗ್ರಾಮದ ಸರಪಳಿ ವ್ಯವಸ್ಥೆಯ 5 ಕೆರೆಗಳನ್ನು ಪುನಶ್ಚೇತನ ಗೊಳಿಸುವ ಗುರಿ ನಮ್ಮದು ಎಂದರು.
ಸಾರಾ ಸಂಸ್ಥೆಯ ಏಸುಪ್ರಕಾಶ್, ಸಾಗರ ಮತ್ತು ಹೊಸನಗರ ತಾಲ್ಲೂಕಿನ ಕೆಲವು ಕೆರೆಗಳು ಈಗಾಗಲೆ ಸಾಮುದಾಯಿಕ ಕಾಳಜಿಯಿಂದ ಪುನಶ್ಚೇತನ ಗೊಂಡಿದ್ದು ಅದರ ಲಾಭವನ್ನು ಪಡೆದಿದ್ದಾರೆ. ಕೇವಲ ಸರ್ಕಾರವೆ ಇಂತಹ ಕೆಲಸ ಮಾಡಬೇಕು ಎಂದು ಕೈಕಟ್ಟಿ ಕುಳಿತರೆ ಉಣ್ಣುವ ಅನ್ನಕ್ಕೂ ಕೈ ಚಾಚುವ ಪರಿಸ್ಥಿತಿ ಬಂದೊದಗುತ್ತದೆ. ಹಾಗಾಗದೆ, ಸಮಾಜದಲ್ಲಿ ನಮ್ಮ ಪಾಲಿನ ಕರ್ತವ್ಯವನ್ನು ನೆನಪಿಸಿಕೊಂಡು ಕೈಜೋಡಿಸುವ ಮನೋಭಾವ ಎಲ್ಲರದ್ದಾಗಬೇಕು ಎಂದರು.
ಬಳಕೆದಾರರ ಸಂಘದ ಕಾರ್ಯದರ್ಶಿ ಹೆಚ್.ಎಸ್.ಜೀವನ್, ಪ್ರಸನ್ನಕುಮಾರ್, ಕೆಂಪರಾಜ್, ವಿನಯ್, ಕಿರಣ, ಯೂತ್ ಬ್ರಿಗೇಡ್ ಮಹೇಶಖಾರ್ವಿ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post