ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣ ಸೇರಿ ತಾಲೂಕಿನ ವಿವಿಧಡೆ ಬಿರುಸಿನ ಗಾಳಿ ಸಮೇತ ಭಾರಿ ಮಳೆಯಾಗಿದ್ದು, ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ದರ್ಶನಕೆ ಹೋದ ವೃದ್ದೆಯೊಬ್ಬರ ಮೇಲೆ ಮನೆಯ ಶೆಡ್ ಬೀಮ್ ತಲೆಯ ಮೇಲೆ ಬಿದ್ದ ಪರಿಣಾಮ ಮೃತ ಪಟ್ಟಿದ್ದಾರೆ.
ಕುಬಟೂರು ಗ್ರಾಮದ ತುಂಗಮ್ಮ ಕುಬಟೂರು (83)ಮೃತ ವೃದ್ದೆ ತುಂಗಮ್ಮ ತಾಲೂಕಿನ ಜೋಳದಗುಡ್ಡೆಯ ಸಂಬಂದಿಕರ ಮನೆಗೆ ಪೂಜಾ ಕಾರ್ಯಕ್ರಮಕ್ಕೆಂದು ತರಳಿದ್ದರು. ಕುಟುಂಬದವರು ಚಂದ್ರಗುತ್ತಿ ದೇವಾಸ್ಥನದಲ್ಲಿ ಪೂಜೆ ಸಲ್ಲಿಸಿ ಕೆಳಗೆ ಇಳಿದು ಬರುವಾಗ ಮಳೆ ಗುಡುಗು ಹಾಗೂ ಭಾರಿ ಗಾಳಿ ಆರಂಭವಾಗಿದೆ. ಈ ವೇಳೆ ಗ್ರಾಮದ ಒಬ್ಬರ ಮನೆಯಲ್ಲಿ ಮಳೆ ಗಾಳಿಂದ ಆಶ್ರಯ ಪಡೆಯಲು ಹೋದಾಗ ಮನೆಯ ಶೇಡ್ ಹಾರಿಹೋಗಿ ಕಬ್ಬಣದ ಬೀಮ್ ತಲೆಯ ಮೇಲೆ ಬಿದ್ದಿದೆ. ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















