ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಕನ್ನಡತನವನ್ನು ಇನ್ನಷ್ಟು ಗಟ್ಟಿಗೊಳಿಸಲು ಅವಕಾಶವಿದೆ ಎಂದು ಯಲಸಿ ಗ್ರಾಮಸಮಿತಿ ಅಧ್ಯಕ್ಷ ಬಿ. ಲೋಕೇಶ್ ಹೇಳಿದರು.
ತಾಲ್ಲೂಕು ಯಲಸಿ ಗ್ರಾಮದಲ್ಲಿ ಕಸಾಪ ಏರ್ಪಡಿಸಿದ್ದ ಬೆಳದಿಂಗಳ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ರಾಜು ಹಿರಿಯಾವಲಿ ಮಾತನಾಡಿ, ಒಂದು ಕಾಲದಲ್ಲಿ ಬಯಲುನಾಡಿನ ಕಥೆಯಾದ ಸಂಗ್ಯಬಾಳ್ಯ ನಾಟಕ ಮಲೆನಾಡಿನಲ್ಲಿ ಜನಪ್ರಿಯತೆ ಪಡೆದಿತ್ತು, ಇಂತಹ ನಾಟಕ ಪುನಃ ನಮ್ಮ ತಾಲ್ಲೂಕು ಹವ್ಯಾಸಿ ಕಲಾವಿದರಿಂದ ಅನಾವರಣಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ನಾಡಿನ ಸಾಹಿತಿ ಚಂದ್ರಶೇಖರ ಕಂಬಾರರ ಕುರಿತು ಉಪನ್ಯಾಸಕ ವಿಜಯಕುಮಾರ್ ದಟ್ಟೇರ್ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಬಳಗದ ಕೆ.ಲಿಂಗರಾಜಗೌಡ, ಮಂಚಿ ರಮೇಶ್, ವಿಶ್ವನಾಥ್ ಹೆಚ್ಚೆ ಸೇರಿದಂತೆ ಪದಾಧಿಕಾರಿಗಳು ಸದಸ್ಯರು, ಕೆಳದಿ ಸೀಮೆ ಭಾರತಿ ಕಲಾವಿದರ ತಂಡ, ಗ್ರಾಮಸ್ಥರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post