Read - 3 minutes
ಕಲ್ಪ ಮೀಡಿಯಾ ಹೌಸ್ | ಸೊರಬ |
ದಸರಾ ಉತ್ಸವ ಸಮಿತಿ, ತಾಲೂಕು ಆಡಳಿ, ಪುರಸಭೆ ಸೊರಬ ಇವರುಗಳ ಸಹಯೋಗದಲ್ಲಿ ಅ.15 ರಿಂದ ಅ.24 ರವರೆಗೆ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಸುರಭಿ ಸಾಂಸ್ಕೃತಿಕ ವೇದಿಕೆಯಲ್ಲಿ ಸಾರ್ವಜನಿಕ ದಸರಾ ಉತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಪ್ರಶಾಂತ ಮೇಸ್ತಿ ತಿಳಿಸಿದ್ದಾರೆ.
ಶನಿವಾರ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಸಮಿತಿಯ ವತಿಯಿಂದ ಕಳೆದ 14 ವರ್ಷಗಳಿಂದ ಸಾರ್ವಜನಿಕರ ಸಹಕಾರದಿಂದ ಉತ್ತಮವಾದ ದಸರಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದ್ದು, ಈ ಬಾರಿ 15ನೇ ವರ್ಷದ ದಸರಾ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿoದ ಆಚರಿಸಲಾಗುವುದು.

- 16ರ ಸೋಮವಾರ ಸಂಜೆ ನಡೆಯುವ ಸಭಾ ಕಾರ್ಯಕ್ರಮದ ನಂತರ ಲಕ್ಷಿ ಮುರುಳೀಧರ ಹಾಗೂ ವೈಷ್ಣವಿ ವೈದ್ಯ ಅವರಿಂದ ಸಂಗೀತ ಲಹರಿ ಮತ್ತು ಸಿರಿಗಂಧ ತಂಡದವರಿಂದ ಗೀತಗಾಯನ ನಡೆಯಲಿದೆ.
- 17ರ ಮಂಗಳವಾರ ಎಂ.ಎಸ್. ಭರತನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಸ್ವರಾಂಜಲಿ ತಂಡ ಭೀಮನಕೋಣೆ ಅವರಿಂದ ಸ್ವರಾಂಜಲಿ ಕಾರ್ಯಕ್ರಮ
- 18ರ ಬುಧವಾರ ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ ಹಾಗೂ ಸಂಜೆ ಜನಪದ ಕಲಾವಿದ ಶಿವರುದ್ರಪ್ಪ ಜೋಗಿ ತಂಡದವರಿಂದ ಜಾನಪದ ವೈಭವ, ಎಬಿಸಿಡಿ ಡ್ಯಾನ್ಸ್ ಗ್ರೂಪ್ ಅವರಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ
- 19ರ ಗುರುವಾರ ಸಂಜೆ ವಸಂತಕುಮಾರ್ ಬಾಂಬೋರೆ ತಂಡದವರಿoದ ಭಕ್ತಿ ಸಂಗೀತ ಹಾಗೂ ಆಕಾಶವಾಣಿ ಕಲಾವಿದ ಹೆಚ್.ಗುರುಮೂರ್ತಿ ತಂಡದವರಿoದ ರಸಮಂಜರಿ ಕಾರ್ಯಕ್ರಮ
- 20ರ ಶುಕ್ರವಾರ ಸಂಜೆ ಪುಟ್ಟರಾಜ ಗವಾಯಿ ಸಂಗೀತ ಶಾಲೆಯ ಪ್ರವೀಣ ಭಂಡಾರಿ ಮತ್ತು ಶಿಷ್ಯ ವೃಂದದಿoದ ಲಘು ಸಂಗೀತ ಹಾಗೂ ದತ್ತಮೂರ್ತಿ ಭಟ್ ಸಂಚಾಲಕತ್ವದಲ್ಲಿ ನಾಟ್ಯಶ್ರೀ ಕಲಾತಂಡ ಶಿವಮೊಗ್ಗ ಅವರಿಂದ ಮಾರುತಿ ಪ್ರತಾಪ ಪ್ರಸಂಗ ಯಕ್ಷಗಾನ ನಡೆಯಲಿದೆ.
- 21ರ ಶನಿವಾರ ಮಧ್ಯಾಹ್ನ 2.30ಕ್ಕೆ ಜಂಗೀ ಕುಸ್ತಿ ಪಂದ್ಯಾವಳೀ ನಡೆಯಲಿದೆ. ಸಂಜೆ ನಡೆಯುವ ಮಹಿಳಾ ದಸರಾ ಸೌರಭ ಕಾರ್ಯಕ್ರಮವನ್ನು ಅನಿತಾ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಸಮಿತಿಯ ಮಹಿಳಾ ಅಧ್ಯಕ್ಷೆ ಸುಜಾತ ಜೋತಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಹೆಚ್.ವಿ. ಸೌಮ್ಯ ಮತ್ತು ವೃಂದ ಬೆಂಗಳೂರು ಕವರಿಂದ ಗಜಗೌರಿ ವೃಥ ಹರಿಕಥೆ ಕಾಲಕ್ಷೇಪ, ಸ್ಥಳೀಯ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
- 22ರ ಭಾನುವಾರ ಬೆಳಿಗ್ಗೆ ನವಚಂಡಿಕಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ವನಸುಮ ಕಲಾ ಬಳಗದಿಂದ ಜಾನಪದ ಗೀತ ಗಾಯನ, ವಿಜಯಕುಮಾರ್ ಬಾಂಬೋರೆ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
- 23ರ ಸೋಮವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಸುರಭಿ ಮಹಿಳಾ ಯಕ್ಷ ಬಳಗದಿಂದ ಶ್ರೀ ದೇವಿ ಮಹಾತ್ಮೆ ಮಹಿಳಾ ಯಕ್ಷಗಾನ ನಡೆಯಲಿದೆ.
- 24ರ ಮಂಗಳವಾರ ಮಧ್ಯಾಹ್ನ 3 ಗಂಟೆಯಿoದ ಪಟ್ಟಣದ ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವದೊಂದಿಗೆ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ, ವಿಶೇಷ ಸಿಡಿಮದ್ದು ಪ್ರದರ್ಶನ, ದುರ್ಗಾದೇವಿಯ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು, ಪುರ ನಾಗರೀಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮೂರ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎನ್.ಷಣ್ಮುಖಾಚಾರ್, ಮಹಿಳಾ ಅಧ್ಯಕ್ಷೆ ಸುಜಾತ ಜೋತಾಡಿ, ಸಮಿತಿಯ ಪದಾಧಿಕಾರಿಗಳಾದ ಸಣ್ಣಬೈಲ್ ಪರಶುರಾಮ, ಬಂದಿಗೆ ಬಸವರಾಜ್ ಶೇಟ್, ಡಿ.ಎಸ್. ಶಂಕರ್ ಶೇಟ್, ರಮೇಶ್ ಮಂಚಿ, ಬಸವಂತಪ್ಪ ಗುರ್ಕಿ ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
Discussion about this post