ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಕುಪ್ಪಗಡ್ಡೆ ಗ್ರಾಮದ ದೊಡ್ಡ ಕೆರೆಯಲ್ಲಿ ಬುಧವಾರ ಭರ್ಜರಿಯಾಗಿ ಮೀನು ಬೇಟೆ #fish hunting (ಕೆರೆಬೇಟೆ) ಜರುಗಿತು.
ಏಷ್ಯಾ ಖಂಡದಲ್ಲಿಯೇ ಅತಿಹೆಚ್ಚು ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನಲ್ಲಿ ಈ ರೀತಿ ಬೃಹತ್ ಕೆರೆಬೇಟೆ ವಿಶೇಷವಾಗಿ ಆಚರಿಸಲಾಗುತ್ತದೆ. ಮಲೆನಾಡಿನ ಅಪ್ಪಟ್ಟ ಗ್ರಾಮೀಣ ಕ್ರೀಡೆಯಾಗಿರುವ ಈ ಬೇಟೆಯಲ್ಲಿ ಭಾಗವಹಿಸುವವರು ಏಕಕಾಲದಲ್ಲಿ ಕೆರೆಗೆ ಇಳಿದು ಮೀನು ಹಿಡಿಯುತ್ತಾರೆ. ಈ ದೃಶ್ಯ ವೀಕ್ಷಿಸಲು ನೂರಾರು ಜನರು ಆಗಮಿಸುತ್ತಾರೆ.
ಪ್ರತಿ ವರ್ಷ ಮಳೆಗಾಲದ ವೇಳೆ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ಬೇಸಿಗೆಯಲ್ಲಿ ಕೆರೆ ಬತ್ತಿದ ನಂತರ ಕೆರೆಬೇಟೆ ನಡೆಯುತ್ತದೆ. ಈ ವೇಳೆ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಹರ್ಷ ಉತ್ಸವವಿರುತ್ತದೆ.
ಈ ಬಾರಿಗೆ ನಡೆದ ಕೆರೆಬೇಟೆಯಲ್ಲಿ ಕೇವಲ ಕೂಣಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕುಪ್ಪಗಡ್ಡೆ ಮಾತ್ರವಲ್ಲದೇ ಸುತ್ತಮುತ್ತಲ ಗ್ರಾಮಗಳ ಜನರು ಸಹ ಜಾತಿ-ಮತ ಭೇದವಿಲ್ಲದೇ, ಹಿರಿಯರು-ಕಿರಿಯರೆನ್ನದೆ ಈ ಬೇಟೆಯಲ್ಲಿ ಭಾಗವಹಿಸಿದರು. ಕೆಲವರಿಗೆ 8 ಕೆ.ಜಿ ವರೆಗೆ ಮೀನು ಸಿಕ್ಕಿದ್ದು, ಕೆಲವರು ಸಣ್ಣ ಮೀನುಗಳನ್ನು ಹಿಡಿದು ತೃಪ್ತಿಪಟ್ಟರು.
ವಿಶೇಷವೆಂದರೆ, ಬಿದರಿನಲ್ಲಿ ತಯಾರಾಗುವ ಕೂಣಿಯ ಜಾಗದಲ್ಲಿ ಕಬ್ಬಿಣದ ಕೂಣಿಗಳೂ ಸಹ ಬಳಸಲಾಗಿದ್ದವು ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಅಥವಾ ಗೊಂದಲಗಳಿಗೆ ಅವಕಾಶ ನೀಡದೆ ಕ್ರಮಬದ್ಧವಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ವರದಿ: ಮಧು ರಾಮ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















