ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಸಕ್ತ ಸಾಲಿನ ಪಿಯೂ ಪರೀಕ್ಷೆಯಲ್ಲಿ #PU Result ತಾಲ್ಲೂಕಿನ ಇಬ್ಬರು ವಿದ್ಯಾರ್ಥಿಗಳು ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಉತ್ತಮ ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಇಲ್ಲಿನ ಸರ್ಕಾರಿ ಪಿಯೂ ಕಾಲೇಜು ವಾಣಿಜ್ಯ ಕಾಮರ್ಸ ವಿಭಾಗದ ವಿದ್ಯಾರ್ಥಿ ಕುಬೇರಗೌಡ ಪಾಟಿಲ್ 600 ಕ್ಕೆ565 ಅಂಕ ಪಡೆದು ಶೇ. 94.16 ರ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.
ಈತ ರೋಣ ತಾಲ್ಲೂಕಿನ ಅಮರಗೋಳದವನು. ಸೊರಬದ ಸಂಬಂದಿ ನಿವೃತ್ತ ಶಿಕ್ಷಕ ವ್ಹಿ.ಬಿ. ಜಾವೂರ್ ಮನೆಯಲ್ಲಿದ್ದು ಓದಿಕೊಂಡವ, ಬಡ ಕುಟುಂಬದಿಂದ ಬಂದ ಈತನಿಗೆ ತಂದೆ ಇಲ್ಲ. ಅವರ ಅಜ್ಜಿ ಓದಲು ಹಣ ಕೊಡುತ್ತಿದ್ದು ಅಜ್ಜಿಯ ಹಣವನ್ನು ಸದ್ವಿನಿಯೋಗ ಮಾಡಿಕೊಂಡಿದ್ದಾನೆ. ಸಭ್ಯತೆಯನ್ನು ಮೈಗೂಡಿಸಿಕೊಂಡ ಈತ ಕಾಲೇಜಿನ ಎಲ್ಲಾ ಉಪನ್ಯಾಸಕರ ಮೆಚ್ಚಿನ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ.
Also read: ರಾಮನ ಹೆಸರು ಹೇಳಲು ರಾಘವೇಂದ್ರ ಅನರ್ಹ: ಆಯನೂರು ಮಂಜುನಾಥ್ ಟೀಕೆ
ಇನ್ನೋರ್ವ ವಿದ್ಯಾರ್ಥಿನಿ ಧನ್ಯ ಕಡಸೂರು ಗ್ರಾಮದವರಾಗಿದ್ದು, ತಾಯಿ ನೇತ್ರಾವತಿ ಪ್ರೌಢಶಾಲೆ ಅಡುಗೆ ಕಾರ್ಯಕರ್ತೆ, ತಂದೆ ಶ್ರೀಧರಾಚಾರ್ಯ ಸಣ್ಣಪುಟ್ಟ ಕಬ್ಬಿಣಕೆಲಸ, ಮರಗೆಲಸ ಇತ್ಯಾದಿ ಮಾಡಿ ಜೀವನ ಸಾಗಿಸುತ್ತಿದ್ದು ಮಕ್ಕಳ ಶಿಕ್ಷಣ ವಿಷಯದಲ್ಲಿ ಅತಿ ಹೆಚ್ಚು ಕಾಳಜಿ ವಹಿಸಿರುವ ಪರಿಣಾಮ ಮಗಳು ಧನ್ಯ ಸಿದ್ದಾಪುರ ಸರ್ಕಾರಿ ಪಿಯೂ ಕಾಲೇಜಿನಲ್ಲಿ ವಿಜ್ಞಾನ ಓದಿ 541 ಅಂಕ ಪಡೆದಿದ್ದಾಳೆ.
ಬಡತನದ ನಡುವೆಯೆ ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇವರು ದೇಶದ ಆಸ್ತಿ ಇವರ ಸಾಧನೆಗೆ ಸಮಾಜ, ಸರ್ಕಾರ ಬೆನ್ನುತಟ್ಟಿ ಪ್ರೋತ್ಸಾಹಿಸುವುದರ ಮೂಲಕ ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದಿರುವ ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post