ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಕೃತಿಯ ಸಮತೋಲನಕ್ಕೆ ಪೂರಕವಾಗಿ ಭಾರತೀಯ ಆಚರಣೆಗಳು ಅರಳಿದ್ದು, ಆಚರಣೆಗಳ ಮೌಲ್ಯವನ್ನು ವಿವೇಚಿಸಿ ಆಚರಿಸುವಲ್ಲಿ ಅರ್ಥವಿದೆ ಎಂದು ಪಟ್ಟಣದ ಹಿರಿಯರು, ಉಮಾಮಹೇಶ್ವರ ಆಡಳಿತ ಮಂಡಳಿಯ ಪ್ರಮುಖರಾದ ವಾಮನಭಟ್ ಭಾವೆ ಹೇಳಿದರು.
ಪಟ್ಟಣದ ಉಮಾಮಹೇಶ್ವರ ದೇಗುಲದ ಆವರಣದಲ್ಲಿ ಲಯನ್ಸ್ ಸಂಸ್ಥೆ ಸರ್ವೋದಯ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್, ಪರ್ಯಾವರಣ ಗತಿವಿಧಿ, ಉಮಾಮಹೇಶ್ವರ ದೇಗುಲ ಸಮಿತಿ ಮುಂತಾದ ಸಂಘಟನೆಯವರ ನವಗ್ರಹ ವನ ಸ್ಥಾಪನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

Also read: ಬೆಂಗಳೂರು | ಜಯನಗರ ರಾಯರ ಮಠದಲ್ಲಿ ಆರಾಧನೆಗೆ ಸಿದ್ದತಾ ಸಭೆ | 7 ದಿನ ವೈವಿಧ್ಯಮಯ ಕಾರ್ಯಕ್ರಮ
ನವಗ್ರಹ ವನ ಕಲ್ಪನೆಯ ರೂವಾರಿ ಲಯನ್ಸ್ ಸಂಸ್ಥೆಯ ಹೆಚ್.ಎಂ.ಪ್ರಶಾಂತ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ವನೀಕರಣ, ಜೀವವೈವಿಧ್ಯ ಸಂರಕ್ಷಣೆ, ಮನುಷ್ಯ ಸಂಬಂಧಗಳಲ್ಲಿನ ಮೌಲ್ಯ ಕಾಪಾಡಿಕೊಳ್ಳುವಿಕೆ ಅತ್ಯವಶ್ಯವಿದ್ದು, ಅಲ್ಲಲ್ಲಿ ಇಂತಹ ವನಗಳ ರಚನೆಯಾಗಬೇಕಿದೆ ಎಂದರು.

ಪರ್ಯಾವರಣ ಗತಿವಿಧಿಯ ಶ್ರೀಪಾದ ಬಿಚ್ಚುಗತ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಭುವನೇಶ್, ಲಯನ್ಸ್ ಕಾರ್ಯದರ್ಶಿ ಪ್ರಶಾಂತ ಹೆಚ್.ಎಂ. ದೀಪಕ್ ದೋಂಗಡೇಕರ್ ಎಂ.ಕೆ.ವೆಂಕಟೇಶ ಮೂಡಗೋಡು, ಎಸ್.ಕೃಷ್ಣಾನಂದ, ಉಮಾಮಹೇಶ್ವರ ಭಾವೆ ಫೌಂಡೇಷನ್ ನ ವಾಮನಭಟ್ ಭಾವೆ, ದಿನಕರ ಭಾವೆ, ಸಚ್ಚಿದಾನಂದ ಭಾವೆ, ಸುಧಾಕರ ಭಾವೆ, ವೇಣುಗೋಪಾಲ್, ಸತೀಶ್ ಬೈಂದೂರು, ಗೌತಮ್, ಸುಧನ್ವ ಮೊದಲಾದವರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Discussion about this post