ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendra Swamy Mutt ಆಗಸ್ಟ್ 18ರಿಂದ 24ರವರೆಗೂ ರಾಯರ ಆರಾಧನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸ್ವಯಂ ಸೇವಕರ ಸಭೆಯನ್ನು ನಡೆಸಲಾಯಿತು.
ಈ ಕುರಿತಂತೆ ಮಾಹಿತಿ ನೀಡಿರು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರು, ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಆಗಸ್ಟ್18 ರಿಂದ 24ರವರೆಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಶ್ರೀಮಠದಲ್ಲಿ ಆಯೋಜಿಸಲಾಗಿದೆ ಎಂದರು.
ಆಗಸ್ಟ್ 18ರಂದು ಸಂಜೆ 6.30ಕ್ಕೆ ಉಡುಪಿಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
Also read: Students of Purna Chetana school students pays a tribute to Indian soldiers through a ballet
ನಂದಕಿಶೋರ್ ಆಚಾರ್ಯರು ಮಾತನಾಡಿ, ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ 353ನೇ ಆರಾಧನಾ ಮಹಾರಥೋತ್ಸವವು ಭಕ್ತಾದಿಗಳ ಸಹಕಾರದೊಂದಿಗೆ ಅತ್ಯಂತ ಸಂಭ್ರಮ ಸಡಗರ ವಿಜೃಂಭಣೆಯಿAದ ನೆರವೇರಿಸಲು ಉದ್ದೇಶಿಸಿದ್ದು, ಈ ಸಂದರ್ಭದಲ್ಲಿ ಶ್ರೀ ಗುರುರಾಯರ ಸನ್ನಿಧಿಗೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಸುಮಾರು ವರ್ಷಗಳಿಂದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಭಕ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊAಡು ಶ್ರೀಮಠದ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ತಿಳಿದು ಸಂತೋಷ ವ್ಯಕ್ತಪಡಿಸಿದರು.
ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?
ಆಗಸ್ಟ್ 18ರಿಂದ 24ರವರೆಗೂ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಭಕ್ತರಿಗೆ ಅನ್ನಸಂತರ್ಪಣೆ, ಉತ್ಸವಗಳು, ಪ್ರವಚನ ನಡೆಯಲಿದೆ.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀಮತಿ ಮೇಘ ಶಿವಕುರ್ಮಾ (ಹರಿದಾಸವಾಣಿ), ವಿದ್ವಾನ್ ಶ್ರೀ ಪ್ರಾದೇಶಾಚಾರ್ಯ (ಹರಿದಾಸ ಮಂಜರಿ), ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್-ಅಶೋಕ್ (ಹರಿನಾಮ ಘೋಷ), ವಿದ್ವಾನ್ -ಜಯತೀರ್ಥ ಮೇವುಂಡಿ (ಹರಿನಾಮ ಸಂಕೀರ್ತನೆ), ವಿದ್ವಾನ್ ಶ್ರೀ ಶೇಷಗಿರಿದಾಸ್ ರಾಯಚೂರು (ದಾಸರ ಪದಗಳ ಗಾಯನ), ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ (ಭರತನಾಟ್ಯ), ವಿದ್ವಾನ್ ಜಗನ್ನಾಥಾಚಾರ್ಯ ರಾಯಚೂರು ಇವರಿಂದ ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ.
ಸ್ವಯಂಸೇವಕರ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಿಬ್ಬಂದಿಗಳು ಹಾಗೂ ಮಧುರನಾಥ್, ಡಾ. ಶ್ರೀಧರ್, ಸುರೇಶ್, ವಿಜಯ್ ಕುಮಾರ್, ಶ್ರೀನಾಥ್, ಇಂಜಿನಿಯರ್ ಶ್ರೀಧರ್, ಜಯಂತಿ ರಾಘವೇಂದ್ರ, ಉಷಾ ಮೋಹನ್, ಎ. ಸಂತೋಷ್, ರಾಜೇಶ್ ಕುಲಕರ್ಣಿ ಸೇರಿ ನೂರಾರು ಸ್ವಯಂ ಸೇವಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post