ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಕನ್ನಡ ಚಿತ್ರರಂಗಕ್ಕೆ ವಿಶ್ವ ಮಟ್ಟದ ಖ್ಯಾತಿ ತಂದ ಮಹಾನ್ ನಿರ್ದೇಶಕರಲ್ಲಿ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ #PuttannaKanagal ಪ್ರಮುಖರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ #KannadaSahityaParishad ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ “ಪುಟ್ಟಣ್ಣ ಕಣಗಾಲ್ ಅವರ ಕೊಡುಗೆಗಳು” ವಿಷಯದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also Read>> ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?
ಪುಟ್ಟಣ್ಣ ಕಣಗಾಲ್ ಕಾದಂಬರಿ ಆಧಾರಿತ ಚಿತ್ರಗಳನ್ನು ವಿಶಿಷ್ಟ ಶೈಲಿಯಲ್ಲಿ ನಿರ್ದೇಶಿಸಿ ಕನ್ನಡ ಸಿನಿರಂಗಕ್ಕೆ #KannadaMovies ಹೊಸ ದಿಕ್ಕನ್ನು ತೋರಿಸಿದವರು ಎಂದು ಅಭಿಪ್ರಾಯಪಟ್ಟರು.
ಅವರ ಚಿತ್ರಗಳಲ್ಲಿ ಕಲೆ, ಸಾಹಿತ್ಯ, ಭಾವನಾತ್ಮಕತೆ, ಮಾನವೀಯ ಸಂಬಂಧಗಳು ಹಾಗೂ ಸಾಮಾಜಿಕ ಕಾಳಜಿಯೊಂದಿಗೆ ಮಹಿಳಾ ಪ್ರಾಧಾನ್ಯತೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ಮೂಲಕ ಕನ್ನಡ ಚಿತ್ರರಂಗ ಶಾಶ್ವತವಾಗಿ ಉಳಿಯುವಂತಹ ದೃಢವಾದ ನೆಲೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
Also Read>> ಕ್ಯಾನ್ಸರ್ ಅಂತ್ಯವಲ್ಲ, ಹೊಸ ಬದುಕಿನ ಆರಂಭ | ಸರ್ವೈವರ್ ಡೇಯಲ್ಲಿ ಬದುಕು ಗೆದ್ದವರ ಸ್ಪೂರ್ತಿದಾಯಕ ಸಂದೇಶ
ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್, ರಾಮಕೃಷ್ಣ, ಶ್ರೀಧರ್, ಜೈ ಜಗದೀಶ್ ಸೇರಿದಂತೆ ಅನೇಕ ಗಣ್ಯ ನಟರನ್ನು ಪರಿಚಯಿಸಿದ ಕೀರ್ತಿ ಅವರದು. ಜೊತೆಗೆ ಕಲ್ಪನಾ, ಆರತಿ, ಪದ್ಮಾ ವಾಸಂತಿ, ಅಪರ್ಣ ಮುಂತಾದ ನಟಿಯರಿಗೂ ಅವಕಾಶ ನೀಡಿದ ಶಿಲ್ಪಿಯಾಗಿದ್ದಾರೆ ಎಂದು ವಿವರಿಸಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ ಜನಿಸಿದ ಪುಟ್ಟಣ್ಣ ಕಣಗಾಲ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಅವರು ಸ್ವಾಗತಿಸಿ ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news

Comments 1