ಕಲ್ಪ ಮೀಡಿಯಾ ಹೌಸ್ | ಸೊರಬ |
ಎಂ.ವಿ ಕೃಷ್ಣಪ್ಪ ಅಭಿಮಾನಿ ಬಳಗ ಇವರ ಸಹಭಾಗಿತ್ವದಲ್ಲಿ ಎಂ.ವಿ. ಕೃಷ್ಣಪ್ಪ ಅವರ 49ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಕ್ಟೋಬರ್ 1ರ ಶುಕ್ರವಾರ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ರಂಗಮಂದಿರದಲ್ಲಿ ಬೆಳಗ್ಗೆ ೧೦:೩೦ಕ್ಕೆ ಶಿಬಿರ ಆರಂಭವಾಗಲಿದ್ದು, ಜಡೆ ಮುರುಘಾ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಟ, ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಾನಂದ ಪಿ. ರಾಣಿ, ತಾಲೂಕು ಆರೋಗ್ಯಧಿಕಾರಿ ಡಾ. ವಿನಯ್ ಪಾಟೀಲ್, ಪೂಣಿಮಾ ಕೃಷ್ಣಪ್ಪ, ಎಂ.ವಿ.ಕೆ. ದೃಶ್ಯ, ಎಂ.ವಿ.ಕೆ. ದೃವ, ಸುರಭಿವಾಣಿ ಪತ್ರಿಕೆ ಸಂಪಾದಕ ಎಸ್.ಜಿ. ರಾಮಚಂದ್ರ, ಪತ್ರಿಕಾ ಛಾಯಾಗ್ರಾಹಕ ದಿನೇಶ್, ಸತೀಶ್, ನಾಗರಾಜ್ ದೇವರಂಗಡಿ, ಪ್ರಕಾಶ್ ಜೆಮ್ಸ್, ಡೊಮಿನಿಕ್, ಮಂಜು ಕೊಟ್ಯಾನ್, ಶರಣ್ ತಾಳದ್, ನೌಫಾಲ್, ರವಿ ಕೊರಕೋಡು ಉಪಸ್ಥಿತರಿರಲಿದ್ದಾರೆ.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















