ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಗುಡುಗು, ಬಿರುಗಾಳಿ ಸಹಿತ ಮಳೆಗೆ ಹಲವು ಬಡಾವಣೆಗಳಲ್ಲಿ ಅನಾಹುತ ಸೃಷ್ಟಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.
ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರಕ್ಕೆ ಧಕ್ಕೆಯಾಯಿತು. ಹೊರವಲಯದ ರಾಜೀವನಗರದಲ್ಲಿ 3 ಮನೆಗಳ ಮೇಲೆ ಮರ ಬಿದ್ದಿದ್ದು ಇನ್ನೂ ಕೆಲವು ಮನೆಗಳ ಹಂಚು ತಗಡು ಶೀಟ್ ಗಳು ಹಾರಿ ಹೋಗಿ ಹಾನಿಯಾಗಿದೆ.
ಬೆಳಗಿನಿಂದ ಬಿಸಿಲ ಧಗೆಯಲ್ಲಿ ಬೆಂದ ಜನರಿಗೆ ಮಧ್ಯಾಹ್ನ ನಂತರ ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಬಿದ್ದ ಬಿರುಗಾಳಿ ಮಳೆ ತಂಪಾದ ಅನುಭವದ ಜತೆಗೆ ತಾಪವನ್ನೂ ತಟ್ಟಿಸಿದ್ದು ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.
ಕೆಲವು ಕಡೆಗಳಲ್ಲಿ ಮಳೆನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿ ನೀರು ನಿಂತ ದೃಶ್ಯಾವಳಿಗಳು ಕಂಡುಬಂದವು. ಮಳೆಗಾಲ ಆರಂಭವಾಗುವ ಸಮಯ ಹತ್ತಿರ ಬಂದರೂ ಚರಂಡಿಯ ರಿಪೇರಿ ಕಾರ್ಯಗಳು ನಡೆದಿಲ್ಲ,ಕೆಲವು ಕಡೆಗಳಲ್ಲಿ ಚರಂಡಿಯೇ ಇಲ್ಲದೆ ನೀರು ರಸ್ತೆಯ ಮೇಲೆ ಹರಿದು ರಸ್ತೆ ಹಾಳಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದು, ಸಂಬಂಧಿಸಿದ ಇಲಾಖೆಯವರು ದೃಷ್ಟಿಹಾಯಿಸಬೇಕಾಗಿದೆ.
ಘಟನೆ ತಿಳಿದ ಕೂಡಲೇ ಮಾನ್ಯ ತಾಲೂಕು ದಂಡಾಧಿಕಾರಿಗಳ ಕಚೇರಿ ಸಿಬ್ಬಂದಿ. ಪುರಸಭೆ ಮುಖ್ಯಧಿಕಾರಿಗಳು ಅರಣ್ಯ ಇಲಾಖೆ ರೇಂಜ್ ಫಾರೆಸ್ಟ್ ಆಫೀಸರ್ ಮತ್ತು ಮೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹಾಗೂ ಅಸ್ವಸ್ಥರಿಗೆ ಧೈರ್ಯ ತುಂಬಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post