ಕಲ್ಪ ಮೀಡಿಯಾ ಹೌಸ್ | ಸೊರಬ |
ಈಚೆಗೆ ಬೆಂಗಳೂರಿನಲ್ಲಿ ನಡೆದ ಜೀವವೈವಿಧ್ಯ ಮಂಡಳಿಯ ಸಭೆ ಕೈಗೊಂಡ ನಿರ್ಧಾರಗಳನ್ನು ವೃಕ್ಷಲಕ್ಷ ಆಂದೋಲನ ಸ್ವಾಗತಿಸಿದೆ. ನಾಡಿನ ಸೂಕ್ಷ್ಮ ಜೀವವೈವಿಧ್ಯ ತಾಣಗಳಾಗಿರುವ ನದಿ ಮೂಲಗಳ ಉಳಿವಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಮುಂದಾದ ಮಂಡಳಿಗೆ ಅಭಿನಂದನೆ ಹೇಳಿದೆ.
ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ 22 ನದಿಗಳು, 180 ಉಪನದಿಗಳು ಹುಟ್ಟಿ ಹರಿದು ನಾಡನ್ನು ಸಮೃದ್ಧಿ ಮಾಡುತ್ತಿವೆ. ಜಲ ಅಕ್ಷಯ ಪಾತ್ರಗಳು ಇವು. ನದಿ ಮೂಲಗಳ ಅಸ್ತಿತ್ವಕ್ಕೆ ಆತಂಕ ಬರುತ್ತಿವೆ. ಇವುಗಳ ಸಂರಕ್ಷಣೆಗೆ ಪಶ್ಚಿಮ ಘಟ್ಟ ಕಾರ್ಯಪಡೆ ಬೃಹತ ಜನಜಾಗೃತಿ ಅಭಿಯಾನವನ್ನು 10 ವರ್ಷ ಹಿಂದೆ ನಡೆಸಿತ್ತು ಎಂಬುವದನ್ನು ಕೆ. ವೆಂಕಟೇಶ ಉಲ್ಲೇಖಿಸಿದ್ದಾರೆ.

ಆಮೆಗಳ ಆವಾಸ ಸ್ಥಾನ ಸಮುದ್ರ ತೀರಗಳು. ಇವುಗಳ ಬಗ್ಗೆ ತಳಮಟ್ಟದಲ್ಲಿ ಜಾಗೃತಿ ರಕ್ಷಣಾಕ್ರಮ ಇನ್ನಷ್ಟು ಬೇಕು. ಕರಾವಳಿಯ ಅಪಾರ ಜೀವ ಸಂಕುಲ ನಾಶದ ಬಗ್ಗೆ ಡಾ. ಪ್ರಕಾಶ ಮೇಸ್ತ ಜೀವವೈವಿಧ್ಯ ಮಂಡಳಿ ಸಭೆಯಲ್ಲಿ ವಿವರ ನೀಡಿದರು. ಈ ಹಿನ್ನೆಲೆಯಲ್ಲಿ ತಜ್ಞರ ತಂಡ ಭೇಟಿ ನೀಡಬೇಕು ಸಭೆ ನಿರ್ಣಯಿಸಿತು. ಅಂತರಾಷ್ಟ್ರೀಯ ಜೀವವೈವಿಧ್ಯ ದಿನ ಆಚರಣೆಯನ್ನು ಗ್ರಾಮ ಪಂಚಾಯತ ಮಟ್ಟದಲ್ಲಿ ನಡೆಸಬೇಕು ಎಂಬ ನಿರ್ಣಯವನ್ನು ಕೈಗೊಂಡಿದೆ ಎಂಬ ಸಂಗತಿ ಬಗ್ಗೆ ವೃಕ್ಷಲಕ್ಷ ಸಂತಸ ವ್ಯಕ್ತಪಡಿಸಿದೆ.
Also read: ಅಡೆತಡೆಗಳಿಗೆ ಕುಗ್ಗದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ: ನಿವೃತ್ತ ಪೊಲೀಸ್ ಅಧಿಕಾರಿ ಮುಗಳಗೇರಿ ಕರೆ
ಮಂಡಳಿ ಸಭೆಯಲ್ಲಿ ಜೀವವೈವಿಧ್ಯ ಮಂಡಳಿಯ ಸದಸ್ಯರಾದ ಡಾ. ಪ್ರಕಾಶ ಮೇಸ್ತ ಹಾಗೂ ಕೆ. ವೆಂಕಟೇಶ ಅವರು ಜೀವವೈವಿಧ್ಯ ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಿಭಾಗ ಅರಣ್ಯ ಅಧಿಕಾರಿಗಳು ತಳಮಟ್ಟದಲ್ಲಿ ಈ ಬಗ್ಗೆ ಗಮನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾಗರ ಮತ್ತು ಸೊರಬ ತಾಲೂಕಿನಲ್ಲಿ ನಡೆಸಿರುವ ಮಾದರಿ ಜೀವವೈವಿಧ್ಯ ಸಮಿತಿ ಚಟುವಟಿಕೆಗಳ ಸಚಿತ್ರ ವರದಿಯನ್ನು ಶ್ರೀಪಾದ ಬಿಚ್ಚುಗತ್ತಿ, ಸಂಪಾದಕತ್ವದಲ್ಲಿ ತಯಾರಿಸಲಾಗಿದೆ. ಮಂಡಳಿ ಸಭೆಯಲ್ಲಿ ಅಧ್ಯಕ್ಷ ರವಿ ಕಾಳಪ್ಪ ಬೆಂಗಳೂರಲ್ಲಿ ಈ ವರದಿಯ ಬಿಡುಗಡೆ ಮಾಡಿದರು.
ಮಂಡಳಿಯ ಡಾ. ಕುಶಾಲಪ್ಪ, ಅನಿತಾ ಅರೇಕಲ್, ಡಾ| ಮಂಜುನಾಥ, ಆರ್. ಕೆ.ಸಿಂಗ್, ವಿಜಯ ಮೋಹನರಾಜ್ ಮುಂತಾದವರು ಪಾಲ್ಗೊಂಡರು.
(ವರದಿ: ಮಧುರಾಮ್, ಸೊರಬ)











Discussion about this post