ಕಲ್ಪ ಮೀಡಿಯಾ ಹೌಸ್ | ಸೊರಬ |
ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನದ ಸಮೀಪದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ #Shri Ayyappa Swamy ಸನ್ನಿಧಾನದಲ್ಲಿ ಜ. 1 ರಂದು ಮಹಾಪೂಜೆ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಅಭಿಷೇಕ. ಅಯ್ಯಪ್ಪ ಸ್ವಾಮಿ ಪುಣ್ಯ ಪ್ರದವಾದ 18 ಮೆಟ್ಟಿಲುಗಳಿಗೆ ಶ್ರೇಷ್ಠ ಪಡಿಪೂಜೆ ಮಹಾಮಂಗಳಾರತಿ ಜರುಗಲಿದೆ. ಸಾರ್ವಜನಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.
Also read: ಡಿ.31: ಸಾಹಿತ್ಯ ಹುಣ್ಣಿಮೆಗೆ 232ನೆಯ ಸಂಭ್ರಮ
ಜ.2 ರಂದು ಬೆಳಗಿನ ಜಾವ 4ಕ್ಕೆ ಗುರುಸ್ವಾಮಿಗಳ ನೇತೃತ್ವದಲ್ಲಿ ಮಾಲೆ ಧರಿಸಿದ ಸ್ವಾಮಿಗಳಿಂದ ಅಗ್ನಿ ಪ್ರವೇಶ ಕುದಿಯುವ ಎಣ್ಣೆಯಲ್ಲಿ ಹಪ್ಪಳ ತೆಗೆಯುವ ಪವಾಡ ನೆರವೇರಲಿದ್ದು ನಂತರ ಇರುಮುಡಿ ಕಟ್ಟಿ ಪೂಜೆ ಸಲ್ಲಿಸಿ ಮಧ್ಯಾಹ್ನ ವೇಳೆ ಗೆ ಸ್ವಾಮಿಗಳು ಚಂದ್ರಗುತ್ತಿಯಿಂದ ಶಬರಿಮಲೆಗೆ ಸ್ವಾಮಿಯ ದರ್ಶನಕ್ಕೆ ತೆರಳಲ್ಲಿದ್ದಾರೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post