ಕಲ್ಪ ಮೀಡಿಯಾ ಹೌಸ್ | ಸೊರಬ |
ಹಲವಾರು ವರ್ಷಗಳಿಂದ ಪಠ್ಯ, ಪಠ್ಯೇತರ, ಸಾಂಸ್ಕೃತಿಕ, ಗುಣಮಟ್ಟದ ಶಿಕ್ಷಣದ ಮೂಲಕ ಗಮನಸೆಳೆದಿರುವ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕಡಸೂರು ಗ್ರಾಮಾಂತರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಈಚೆಗೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಜನಪದ ನೃತ್ಯ ಪ್ರದರ್ಶಿಸಿ ಪ್ರಥಮ ಬಹುಮಾನ ಪಡೆದು ತಾಲ್ಲೂಕು ಕೀರ್ತಿ ಪಾತ್ರರಾದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿಗಳಿಗೆ ತಾಲ್ಲೂಕು ಗಣರಾಜ್ಯೋತ್ಸವ ಸಮಿತಿ ವತಿಯಿಂದ ಗಣರಾಜ್ಯೋತ್ಸವ ದಂದು ಪುರಸ್ಕರಿಸಲಾಯಿತು.
ಈ ವೇಳೆ ಆ ಮಕ್ಕಳು ಜನಪದ ನೃತ್ಯ ಮಾಡುವ ಮೂಲಕ ಸಭಿಕರನ್ನು ರಂಜಿಸಿದರು. ತಾಲ್ಲೂಕು ಆಡಳಿತದ ತಹಶಿಲ್ದಾರ್ ಮೋಹನ್ ಭಸ್ಮೆ, ಬಿಇಒ ರಾಮಲಿಂಗಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ಪುರಸಭೆಯ ಜನಪ್ರತಿನಿಧಿಗಳು ಮೊದಲಾದವರು ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















