ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕಿನ ಕುಬಟೂರು ಗ್ರಾಮದ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಿವಪುತ್ರಪ್ಪ (೫೯) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದ ಅವರು ಮಧ್ಯ ರಾತ್ರಿ ವೇಳೆ ಎದೆ ನೋವೆಂದು ವಿಶ್ರಾಂತಿ ತೆಗೆದುಕೊಳ್ಳಲು ತೆರಳಿದ್ದಾಗಲೇ ಚಿರನಿದ್ರೆಗೆ ಹೋಗಿದ್ದಾರೆ ಎಂದು ಸಹವರ್ತಿಗಳು ತಿಳಿಸಿದ್ದು, ಇವರ ಅಕಾಲಿಕ ಮರಣಕ್ಕೆ ಸೊರಬದ ಅನೇಕ ಸಂಘಸಂಸ್ಥೆಯವರು ಕಂಬನಿ ಮಿಡಿದಿದ್ದಾರೆ.
ಪತ್ನಿ, ಮೂವರು ಹೆಣ್ಣುಮಕ್ಕಳು, ಸಹೋದರರು ಇದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post