Read - 2 minutesಕಲ್ಪ ಮೀಡಿಯಾ ಹೌಸ್ |
ಸೊರಬ |
ಪಶ್ಚಿಮ ಘಟ್ಟಗಳ ಉಳಿವು ಇಡೀ ದೇಶದ ಸುಸ್ಥಿತಿಗೆ ಅಗತ್ಯವಿದೆ. ಪಶ್ಚಿಮ ಭಾಗದಲ್ಲಿ ವಿಸ್ತಾರವಾಗಿ ಹಬ್ಬಿರುವ ಈ ಪರ್ವತ ಶ್ರೇಣಿಯಲ್ಲಿಯೆ ಜನ ಜೀವನಾಡಿಯಾಗಿರುವ ನದಿಗಳು ಹುಟ್ಟಿವೆ. ನಾಡಿಗೆ ಅನ್ನ, ನೀರು ನೀಡಿವೆ ಎಂದು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ವಕೀಲ ಎಂ.ಆರ್. ಪಾಟೀಲ್ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸಾರ ಸಂಸ್ಥೆಯು ಪಜಾ ಟ್ರಸ್ಟ್ ಮತ್ತು ತಾಕಾನಿಪಸಂ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಹ್ಯಾದ್ರಿ ಸಂವಾದ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಯೂಸ್ ಅಂಡ್ ತ್ರೋ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ, ಜಂಕ್ ಫುಡ್, ಪಟಾಕಿ ಸಿಡಿಸುವುದರಿಂದ ಉಂಟಾಗುವ ಅನಾರೋಗ್ಯ ಮತ್ತು ಪರಿಸರ ಮಲೀನತೆ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಿದರು.
ಮುಖ್ಯ ಅತಿಥಿ ನೋಟರಿ ಅಬ್ದುಲ್ ರೆಹಮಾನ್ ಅವರು, ಪರಿಸರ ಸಮತೋಲನದ ಅಗತ್ಯತೆ ಕುರಿತು ಉರ್ದು ಭಾಷೆಯಲ್ಲಿ ಮಕ್ಕಳಿಗೆ ಮನನ ಮಾಡಿದರು.
ಸಾರ ಸಂಸ್ಥೆ ಧನುಷ್, ಪಜಾ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಸಂವಾದದಲ್ಲಿ ಪಾಲ್ಗೊಂಡರು. ಮಕ್ಕಳು ಪ್ರಾಣಿ ಪಕ್ಷಿಗಳ ಕೌತುಕ ವಿಸ್ಮಯಗಳ ಕುರಿತು ಪ್ರಶ್ನೋತ್ತರದ ಮೂಲಕ ಮಾಹಿತಿ ಗ್ರಹಿಸಿದರು. ಮು.ಶಿ. ಬಷೀರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಸಾಜಿಯಾ, ಶಮಾ, ಶಿಕ್ಷಕರಾದ ಕೆ.ಎಸ್. ರಮೇಶ್, ನೀಲಕಂಠ ಸ್ವಾಮಿ, ಫರ್ಜಾನಾ ಬಾನು, ಅಫ್ಸಾನ್ ಮುಂತಾದವರಿದ್ದರು.
Discussion about this post