ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿಎನ್ ರಾವತ್ ಅವರು ಸೇನೆಯಲ್ಲಿ ಅನೇಕ ಸುಧಾರಣೆಗಳನ್ನು ತರುವ ಮೂಲಕ ಸೈನ್ಯವನ್ನು ಬಲಿಷ್ಠಗೊಳಿಸುವ ಜೊತೆಗೆ ಸೈನಿಕರಿಗೆ ಸ್ಫೂರ್ತಿಯಾಗಿದ್ದರು ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಚ್. ಭೀಮಪ್ಪ ತವನಂದಿ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಮುಂಭಾಗದ ವೃತ್ತದಲ್ಲಿ ಮಾಜಿ ಸೈನಿಕರ ಸಂಘದಿಂದ ಇತ್ತೀಚೆಗೆ ನಿಧನರಾದ ಸೇನಾಪಡೆಗಳ ಮುಖ್ಯಸ್ಥ ಜ. ಬಿಪಿಎನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಅಧಿಕಾರಿಗಳಿಗೆ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಹೆಮ್ಮೆಯ ಪುತ್ರರಾಗಿದ್ದ ಬಿಪಿನ್ ರಾವತ್ ಅವರು ದೇಶದ ಮೊದಲ ಸಿಡಿಎಸ್ ಆಗಿ ನೇಮಕವಾಗಿದ್ದರು ಹಾಗೂ ನಾಲ್ಕು ದಶಕಗಳ ಕಾಲ ಭಾರತ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರ ನಿಧನ ಪ್ರತಿಯೊಬ್ಬ ಭಾರತೀಯರಿಗೂ ನೋವು ತರಿಸಿದೆ ಎಂದರು.
ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕೆ.ಜಿ. ಗಣಪತಿ, ಕಾರ್ಯದರ್ಶಿ ಟಿ.ಎನ್. ಮಕರಂದ, ಉಪ ಕಾರ್ಯದರ್ಶಿ ಶಿವರುದ್ರಯ್ಯ, ಖಜಾಂಚಿ ಅಲೆಗ್ಸಾಂಡರ್, ಗುರುಲಿಂಗಪ್ಪ ಗೌಡ, ಜಗದೀಶ್ ಟಿ.ಜಿ., ಆನಂದಪ್ಪ ದೇವತಿಕೊಪ್ಪ, ರಾಜಪ್ಪ, ಕಾಂತೇಶ್, ಕೆ.ಜಿ. ಕೃಷ್ಣಪ್ಪ, ಸದಾಶಿವಪ್ಪ ಸೇರಿದಂತೆ ಇನ್ನೂ ಅನೇಕ ಮಾಜಿ ಯೋಧರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post