ಕಲ್ಪ ಮೀಡಿಯಾ ಹೌಸ್ | ಸೊರಬ |
ಸಹಕಾರ ಸಂಘದ ಅಭಿವೃದ್ಧಿಗೆ ಷೇರುದಾರರ ಪಾತ್ರ ಮಹತ್ವದ್ದಾಗಿದ್ದು, ಖಾಯಂ ಠೇವಣಿ ಇಡಲು ಸದಸ್ಯರು ಮನಸ್ಸು ಮಾಡಬೇಕು ಎಂದು ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘ ನಿಯಮಿತದ ಪ್ರಭಾರ ಅಧ್ಯಕ್ಷ ಮಲ್ಲಿಕಾರ್ಜುನ ಗುತ್ತೇರ್ ಹೇಳಿದರು.
ಪಟ್ಟಣದ ಮುರುಘಾಮಠದ ಆವರಣದಲ್ಲಿ ವೀರಶೈವ ಸಹ್ಯಾದಿ ಪತ್ತಿನ ಸಹಕಾರ ಸಂಘ ನಿಯಮಿತದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಆರಂಭವಾಗಿ ಆರು ವರ್ಷಗಳು ಕಳೆದಿದ್ದು, 3.60 ಲಕ್ಷ ರೂ., ಲಾಭಗಳಿಸಿದ್ದು, 98 ಲಕ್ಷ ರೂ., ವಹಿವಾಟನ್ನು ನಡೆಸುತ್ತಿದೆ. ಸದಸ್ಯರ ಸಹಕಾರದಿಂದ ಉತ್ತಮವಾಗಿ ಸಂಘವು ಬೆಳೆಯುತ್ತಿದೆ. ಜಡೆ, ಆನವಟ್ಟಿ ಚಂದ್ರಗುತ್ತಿ ಭಾಗದಲ್ಲಿ ಸಮಾಜದವರನ್ನು ಸಂಪರ್ಕಿಸುವ ಮೂಲಕ ಸಂಘದಲ್ಲಿ ಷೇರುದಾರರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಮುಂಬರುವ ಸಾಲಿನಿಂದ ಇ-ಸ್ಟಾಂಪಿಂಗ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಜೊತೆಯಲ್ಲಿ ಜಡೆ ಭಾಗದಲ್ಲಿಯೂ ಒಂದು ಕೇಂದ್ರವನ್ನು ತೆರೆಯಲಾಗುತ್ತಿದೆ. ಆನವಟ್ಟಿಯಲ್ಲಿ ಸಂಘದ ಶಾಖೆ ತೆರೆಯುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸಂಘದಿಂದ ಶಾಶ್ವತ ಠೇವಣಿ ಇಡುವುದು. ಗೊಬ್ಬರದ ಅಂಗಡಿ ತೆರೆಯುವುದು, ಎಸ್.ಬಿ, ಖಾತೆ ತೆರೆಯುವುದು ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ನಂತರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಘದ ಅಧ್ಯಕ್ಷ ಎಚ್.ಬಿ. ಇಂದೂಧರ ಒಡೆಯರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಸಂಘದ ನಿರ್ದೇಶಕರಾದ ಕೆ.ವಿ. ಗೌಡ, ಟಿ.ಎಸ್. ಬಂಗಾರಸ್ವಾಮಿ, ಕೆ.ಜಿ. ಲೋಲಾಕ್ಷಮ್ಮ, ಎಚ್.ಪಿ. ಪ್ರೇಮಾ, ಲತಾ ಮಹೇಶ್ವರಗೌಡ, ಎಂ.ಜಿ. ನಿರಂಜನ, ಎಂ.ಎನ್. ಸುರೇಂದ್ರಗೌಡ, ವಿನಯ್ ಪಾಟೀಲ್, ವೀರಭಸವನಗೌಡ, ಸಿಇಓ ಸಿ.ಪಿ. ವಿನಾಯಕ, ಸಿಬ್ಬಂದಿ ಎಸ್. ಪ್ರಿಯಾಂಕ, ಟಿ.ಆರ್. ಬಸವನಗೌಡ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	





 Loading ...
 Loading ... 
							



 
                
Discussion about this post