ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ತಾಲೂಕಿನಲ್ಲಿರುವ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕವಿಪ್ರವಿನಿ ವತಿಯಿಂದ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಹಾಗೂ ಕೆಳಕಂಡ ಪ್ರದೇಶದ ಗ್ರಾಹಕರುಗಳಿಗೆ ಫೆ.16ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ನಿಲುಗಡೆ ಆಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಸೊರಬ ನಗರ, ಸಾರೇಕೊಪ್ಪ, ಬಳ್ಳಿಬೈಲು, ಕುಮ್ಮೂರು, ದೇವತಿಕೊಪ್ಪ, ಕಲ್ಲಂಬಿ ಎನ್‌ಜಿವೈ, ಕಡಸೂರು ಎನ್‌ಜಿವೈ, ನಡಹಳ್ಳಿ, ಬಿಳಗಿ, ಉರಗನಹಳ್ಳಿ, ಅಂಡಿಗೆ, ಕೊಡಕಣಿ, ಯಲವಳ್ಳಿ, ಚಿಕ್ಕಲವತ್ತಿ, ಮಂಚಿ, ಹಾಲಗಳಲೆ, ತಳೆಬೈಲು, ಕುಪ್ಟೆ, ಪುರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಮೆಸ್ಕಾಂ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post