ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಮಲೆನಾಡು ಪ್ರದೇಶ ಚಂದ್ರಗುತ್ತಿ ಭಾಗದಲ್ಲಿ ನಿರಂತರ ಪರಿಸರ ವಿರೋಧಿ ಚಟುವಟಿಕೆಗಳು ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದ್ದು ಮಳೆ ತರುವ ಸಾವಿರಾರು ಎಕರೆ ಎಸ್ಎಫ್ ಶಿಲಾರಣ್ಯ ಮುಕ್ಕಾಗಿದೆ. ರೈತನಿಗೆ ಕೃಷಿಗೆ ನೆರವಾಗುವ ಜಮೀನು ಬರಡಾಗುತ್ತಿದೆ. ಸಾಲದೆಂಬಂತೆ ಈಚೆಗೆ ಕೋಡಂಬಿ ಭಾಗದಲ್ಲಿ ಮರಳು ಜಾಲಾಟದ ದಂದೆಗೆ ಹರಿವ ಹೊಳೆಯೂ ಕಲುಷಿತವಾಗಿದೆ. ಇದರಿಂದಾಗಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಈ ದುಷ್ಕೃತ್ಯಕ್ಕೆ ಬೇಸತ್ತ ಕೋಡಂಬಿ ಗ್ರಾಮ ಜನತೆ ತಹಶಿಲ್ದಾರರಿಗೆ, ರಕ್ಷಣಾ ಇಲಾಖೆಯವರಿಗೆ ದೂರು ಸಲ್ಲಿಸಿದ್ದಾರೆ.
Also read: ಡಾ.ಎಂ. ಮರೀಗೌಡ ಕರ್ನಾಟಕ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯ ರೂವಾರಿ: ಸಿಎಂ ಸಿದ್ದರಾಮಯ್ಯ
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಹರಿಶಿ ಉಪಾಧ್ಯಕ್ಷ ರವಿ ಕುಮಾರ್ ಮಹೇಂದ್ರ T, ಕೃಷ್ಣಮೂರ್ತಿ , ಉಮೇಶ್ E, ದಿನೇಶ್ E. ಸುಧಾಕರ R, ಗಂಗಾಧರ A, ಶಂಕರ್ S, ಮಂಜುನಾಥ K, ಗೋಪಾಲ B ಇತರರೂ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post