ಕಲ್ಪ ಮೀಡಿಯಾ ಹೌಸ್ | ಸೊರಬ |
ಗಣಿ ನೀತಿಯನ್ನು ಅನುಸರಿಸದೆ ಬೇಕಾಬಿಟ್ಟಿ ಬ್ಲಾಸ್ಟ್ ಮಾಡಿದ್ದಕ್ಕಾಗಿ ಬಿಳಿ ಕಲ್ಲು ಕ್ವಾರೆ ಗುತ್ತಿಗೆದಾರರ ಲಾರಿಗಳನ್ನ ತಡೆಹಿಡಿದ ಘಟನೆ ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಕ್ವಾರೆ ಪ್ರದೇಶದಲ್ಲಿ ನಡೆಯಿತು.
ಈ ಹಿಂದೆ ಗಣಿಗಾರಿಕೆಯಿಂದ ಇಲ್ಲಿನ ಸಾಮಾಜಿಕ, ಆರ್ಥಿಕ ಸ್ಥಿತಿ ಅದ್ವಾನಗೊಂಡ ಹಿನ್ನೆಲೆಯಲ್ಲಿ ಉಗ್ರ ಹೋರಾಟವೆ ನಡೆದಿದ್ದು, ವೃಕ್ಷಲಕ್ಷ ಆಂದೋಲನ ಮತ್ತು ಪರಿಸರ ಜಾಗೃತಿ ಟ್ರಸ್ಟ್ ಕೈ ಜೋಡಿಸಿತ್ತು. ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅವಧಿ ಮುಗಿಯುವ ತನಕ ಇಲ್ಲಿನ ಜನತೆಗೆ ಮಾರಕವಾಗದಂತೆ ಗಣಿ ಕಾರ್ಯ ಮುಂದುವರೆಸಲು ಷರತ್ತು ಬದ್ಧ ಅವಕಾಶ ನೀಡಲಾಗಿತ್ತು. ಷರತ್ತು ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ವಾಹನ ತಡೆ ಹಿಡಿದು ಪ್ರತಿಭಟಿಸಿದ್ದರು.
ಬಸ್ತಿಕೊಪ್ಪ ಗ್ರಾಮಸ್ಥರು ಹಾಗೂ ಗುತ್ತಿಗೆದಾರರ ನಡುವೆ ಮಾತುಕತೆ ನಡೆದಿದ್ದು ವಾರಕ್ಕೊಮ್ಮೆ ನಿಗದಿತ ವೇಳೆಯಲ್ಲಿ ಮಾತ್ರ ಬ್ಲಾಸ್ಟಿಂಗ್ ಮಾಡಬೇಕೆಂಬ ಗ್ರಾಮಸ್ಥರ ಷರತ್ತಿಗೆ ಒಪ್ಪದ ಗುತ್ತಿಗೆದಾರರು ವಾರಕ್ಕೆ ಎರಡು ಭಾರಿ ಅವಕಾಶ ಕೊಡಲು ಕೋರಿದರು. ಈ ಹಿಂದೆ ೧೫ ದಿನಕ್ಕೊಮ್ಮೆ ಬ್ಲಾಸ್ಟಿಂಗ್ ಮಾಡಬೇಕೆಂಬ ಷರತ್ತು ವಿಧಿಸಿದ್ದು ಪ್ರಸ್ತುತ ಕೋರಿಕೆಯ ಮೇರೆಗೆ ವಾರಕ್ಕೊಮ್ಮೆ ಬ್ಲಾಸ್ಟಿಂಗ್ ಮಾಡಲು ಒಪ್ಪಿದೆ ವಾರಕ್ಕೆ ಎರಡು ಭಾರಿ ಕೊಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದಾಗ ಗುತ್ತಿಗೆದಾರ ತಾನು ನ್ಯಾಯಾಲಯದಲ್ಲಿ ನ್ಯಾಯ ಕೋರುವುದಾಗಿ ಸಭೆಯಿಂದ ನಿರ್ಗಮಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post