ಕಲ್ಪ ಮೀಡಿಯಾ ಹೌಸ್ | ಸೊರಬ |
ಔದ್ಯೋಗಿಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಹಿಳೆಯರು ಪುರುಷರಿಗೆ ಸಮಾನವಾಗಿ ತಲೆಯೆತ್ತಿರುವುದು ಖುಷಿಯ ವಿಷಯ. ಮಹಿಳೆಯರು ನಾಲ್ಕು ಗೋಡೆಗಳ ಒಳಗೆ ಇರದೇ ಹೀಗೆ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು. ಆದರ್ಶ ಸಮಾಜ ನಿರ್ಮಾಣಕ್ಕೆ ಸಹಾಯಕವಾಗಬೇಕು ಎಂದು ಉದ್ಯಮಿ ಕಂತನಹಳ್ಳಿ ವಿನುತಾ ಎಂ ಮಂಚಾಲೆ ಆಶಿಸಿದರು.
ಪಟ್ಟಣದ ಇಂಡಸ್ಟ್ರಿಯಲ್ ಏರಿಯಾದ 20 ಸ್ಟಿಚ್ ಗಾರ್ಮೆಂಟ್ಸ್‌ನಲ್ಲಿ ತಾಲ್ಲೂಕು ಕನ್ನಡ ಸಾಂಸ್ಕೃತಿಕ ಜಗಲಿ, ಜಗಲಿಯ ಮಹಿಳಾ ಘಟಕ ಹಾಗೂ 20 ಸ್ಟಿಚ್ ಗಾರ್ಮೆಂಟ್ಸ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಹಿಳಾ ದಿನದ ನೆನಪಿಗಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Also read: ಶಿವಮೊಗ್ಗ: ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಪಾರ್ಕ್ ಅಭಿವೃದ್ಧಿಗೆ ಭೂಮಿ ಪೂಜೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ನಾವು ನೋವು ನಲಿವುಗಳನ್ನು ಮರೆಯಲು, ನಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಕ್ರೀಯವಾಗಿರಬೇಕು. ಮಾಡುವ ಯಾವುದೇ ಕೆಲಸದಲ್ಲೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಸಂಘಟಿತರಾಗಬೇಕು ಎಂದರು.
ಈ ಸಂದರ್ಭದಲ್ಲಿ 20 ಸ್ಟಿಚ್ ಗಾಮೆ೯ಂಟ್ಸ್ ವ್ಯವಸ್ಥಾಪಕರಾದ ಲಲಿತಾ ಸುರೇಶ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಮುಖ್ಯ ಅತಿಥಿಯಾಗಿ ಜಗಲಿಯ ಮಹಿಳಾ ಘಟಕದ ಉಪಾಧ್ಯಕ್ಷೆ ಗೌರಮ್ಮ ಎಸ್ ಭಂಡಾರೆ, ಜಗಲಿಯ ಅಧ್ಯಕ್ಷ ಸಾಹಿತಿ ಮಂಜಪ್ಪ ಹುಲ್ತಿಕೊಪ್ಪ, ಜಗಲಿಯ ಉಪಾಧ್ಯಕ್ಷ ಲಿಂಗರಾಜ ಕೆ ಗೌಡರ್, ಗಾಮೆ೯ಂಟ್ಸ್‌ನ ಸುರೇಶ್, ಜಗಲಿಯ ಸಂಚಾಲಕ ಷಣ್ಮುಖಾಚಾರ್ ಎನ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಗುಡಿಗಾರ್, ಪ್ರಧಾನ ಕಾರ್ಯದರ್ಶಿ ಸಾಹಿತಿ ರೇವಣಪ್ಪ ಬಿದರಗೇರಿ ಹಾಗೂ ಗಾಮೆ೯ಂಟ್ಸ್ ನ ವಿವಿಧ ಕೆಲಸಗಾರರು ಇದ್ದರು.

ಕು ಶ್ವೇತಾ ಪ್ರಾರ್ಥಿಸಿ, ವೀಣಾ ಶ್ರೀಧರ್ ನೆಮ್ಮದಿ ಸ್ವಾಗತಿಸಿದರು. ಅನಿತಾ ಸುಬ್ರಹ್ಮಣ್ಯ ನೆಮ್ಮದಿ ವಂದಿಸಿದರು. ಶೈಲಾ ವಿಕ್ರಮ್ ಹೆಬ್ಬಾರ್ ನಿರೂಪಿಸಿದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















